alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಹೊರಬಿತ್ತು ನೌಕರರ ವೇತನ ಪರಿಷ್ಕರಣೆ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಇಲ್ಲಿದೆ. ಶೇ. 30 ರಷ್ಟು ವೇತನ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ. 30 ರಷ್ಟು ವೇತನ ಏರಿಕೆ ಸಂಬಂಧ ಆದೇಶ ಹೊರಡಿಸಲಾಗಿದೆ.

ಪರಿಷ್ಕೃತ ವೇತನ ಪರಿಷ್ಕರಣೆ 2017 ರ ಜುಲೈ 1 ರಿಂದಲೇ ಜಾರಿಯಾಗಲಿದ್ದು, ವೇತನ ಪರಿಷ್ಕರಣೆಯ ಆರ್ಥಿಕ ಲಾಭಗಳು 2018 ರ ಏಪ್ರಿಲ್ 1 ರಿಂದ ಜಾರಿಯಲ್ಲಿರುತ್ತವೆ. ಏಪ್ರಿಲ್ 1 ರಿಂದ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಸಿಗಲಿದೆ.

ಕನಿಷ್ಠ ಮೂಲವೇತನವನ್ನು 17,000 ರೂ.ಗೆ, ಗರಿಷ್ಠ ಮೂಲವೇತನವನ್ನು 1,50,600 ರೂ.ಗೆ ಏರಿಕೆ ಮಾಡಲಾಗಿದೆ. ಶೇ. 45.25 ರಷ್ಟು ಇದ್ದ ತುಟ್ಟಿ ಭತ್ಯೆ ಮೂಲ ವೇತನದಲ್ಲಿ ವಿಲೀನವಾಗಲಿದೆ. ಪಿಂಚಣಿಯಲ್ಲಿಯೂ ಏರಿಕೆಯಾಗಿದೆ.

ಮಾರ್ಚ್ 3 ರಂದು ರಾಜ್ಯ ಸರ್ಕಾರಿ ನೌಕರರ ಸಮಾವೇಶ ನಡೆಯಲಿದ್ದು, ನೌಕರರ ಒಂದು ವರ್ಗ ಸಮಾವೇಶವನ್ನು ಬಹಿಷ್ಕರಿಸುವುದಾಗಿ ಹೇಳಿದ ಹಿನ್ನಲೆಯಲ್ಲಿ ವೇತನ ಪರಿಷ್ಕರಣೆ ಆದೇಶ ಹೊರಡಿಸಲಾಗಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿತ್ತು. ಈಗ ಸಂಪುಟ ಅನುಮೋದನೆ ನಿರೀಕ್ಷಿಸಿ ಆದೇಶ ಹೊರಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...