alex Certify
ಕನ್ನಡ ದುನಿಯಾ       Mobile App
       

Kannada Duniya

ವೇತನ: ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್

ವೇತನ ಏರಿಕೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಏಪ್ರಿಲ್ ತಿಂಗಳಿಂದ ವೇತನದಲ್ಲಿ ಶೇ. 30 ರಷ್ಟು ಏರಿಕೆಯಾಗಲಿದೆ ಎನ್ನಲಾಗಿತ್ತಾದರೂ, ಚುನಾವಣೆ ನೀತಿ ಸಂಹಿತೆ ಕಾರಣದಿಂದ ವೇತನ ಪರಿಷ್ಕರಣೆ ಮುಂದಕ್ಕೆ ಹೋಗಿದೆ.

5.93 ಲಕ್ಷ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ ವೇತನ ಆಯೋಗ ಈಗಾಗಲೇ ವರದಿ ನೀಡಿದ್ದು, ಸರ್ಕಾರ ಕೂಡ ಆದೇಶ ಹೊರಡಿಸಿದೆ. ಆದರೆ, ಆಯೋಗ ಜನವರಿ 31 ರಂದು ವರದಿ ನೀಡಿದ್ದು, ಸರ್ಕಾರ ಮಾರ್ಚ್ 1 ರ ವರೆಗೆ ಆದೇಶ ಹೊರಡಿಸಲು ವಿಳಂಬ ಮಾಡಿತ್ತು. ಆದೇಶದಂತೆ ಏಪ್ರಿಲ್ 1 ರಿಂದ ವೇತನ ಹೆಚ್ಚಳವಾಗಬೇಕಿತ್ತು.

ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಣಕಾಸು ಇಲಾಖೆ ವೇತನ ಪರಿಷ್ಕರಣೆ ಕಡತವನ್ನು ಚುನಾವಣಾ ಆಯೋಗದ ಅನುಮೋದನೆಗೆ ಕಳಿಸಿದೆ.

ಆಯೋಗ ಇನ್ನೂ ಈ ಕುರಿತು ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ಆಯೋಗ ತೀರ್ಮಾನ ಕೈಗೊಂಡರೂ, 2017 ರ ಜುಲೈ 1ರಂದು ಇದ್ದ ಮೂಲ ವೇತನದಲ್ಲಿ ಶೇ. 30 ರಷ್ಟು ವೇತನ ಹೆಚ್ಚಳ ಮಾಡಿ ಫಿಟ್ ಮೆಂಟ್ ಸಿದ್ಧಪಡಿಸುವ ಪ್ರಕ್ರಿಯೆಗೆ ಕಾಲಾವಕಾಶ ಬೇಕಿರುವುದರಿಂದ ಏಪ್ರಿಲ್ ತಿಂಗಳ ವೇತನದಲ್ಲಿ  ಹೆಚ್ಚಳವಾಗುವ ಸಾಧ್ಯತೆ ಇಲ್ಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...