alex Certify
ಕನ್ನಡ ದುನಿಯಾ       Mobile App
       

Kannada Duniya

ವೇತನ ಏರಿಕೆ, ರಜೆ ಖುಷಿಯಲ್ಲಿದ್ದ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ. 30 ರಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ ಪ್ರತಿ ತಿಂಗಳ 4 ನೇ ಶನಿವಾರ ಸರ್ಕಾರಿ ರಜೆ ಮತ್ತು ಎಲ್ಲಾ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಸೌಲಭ್ಯ ಸಿಗಲಿದೆ.

ವೇತನ, ಭತ್ಯೆ ಪರಿಷ್ಕರಣೆ ಕುರಿತಾಗಿ ರಚಿಸಲಾಗಿದ್ದ 6 ನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅಂತಿಮ ವರದಿಯನ್ನು ಸೋಮವಾರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಸಲ್ಲಿಸಲಾಗಿರುವ ವರದಿಯಲ್ಲಿ 2 ನೇ ಶನಿವಾರದ ಜೊತೆಗೆ 4 ನೇ ಶನಿವಾರ ಸರ್ಕಾರಿ ರಜೆ ನೀಡಲು ಶಿಫಾರಸು ಮಾಡಲಾಗಿದೆ. ನೌಕರರಿಗೆ ತರಬೇತಿ, ಹಿರಿಯ ನೌಕರರಿಗೆ ಇನ್ ಕ್ರಿಮೆಂಟ್, ಫಿಟ್ ಮೆಂಟ್ ಹೆಚ್ಚಿಸಬೇಕು. ನಿವೃತ್ತಿ ಉಪದಾನ ಸೌಲಭ್ಯ ಪಡೆಯಲು ಅರ್ಹತಾ ಸೇವಾವಧಿಯನ್ನು 30 ವರ್ಷದವರೆಗೆ ಇಳಿಕೆ ಮಾಡಬೇಕು ಎಂದು ಹೇಳಲಾಗಿದೆ.

ಇದರೊಂದಿಗೆ ಮಹನೀಯರ ಹೆಸರಲ್ಲಿ ರಜೆ ನೀಡುವುದನ್ನು ರದ್ದುಪಡಿಸಿ, ನೌಕರರ ಸಿ.ಎಲ್. ಸಂಖ್ಯೆಯನ್ನು 8 ಕ್ಕೆ ಇಳಿಕೆ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ವಿವಿಧ ಮಹನೀಯರ ಜಯಂತಿಗಳಿಗೆ ಸರ್ಕಾರಿ ರಜೆ ಇರುತ್ತದೆ. ಕೆಲವು ನಿರ್ಬಂಧಿತ ರಜೆ ಕೂಡ ಇವೆ. ವರದಿಯಲ್ಲಿ ಎಲ್ಲಾ ಜಯಂತಿಗಳ ರಜೆಯನ್ನು ರದ್ದುಪಡಿಸಿ ನಿರ್ಬಂಧಿತ ರಜೆಯನ್ನಾಗಿ ಪರಿವರ್ತಿಸಲು ಶಿಫಾರಸು ಮಾಡಲಾಗಿದೆ. 15 ಸಿ.ಎಲ್. ಗಳನ್ನು 8 ಕ್ಕೆ ಇಳಿಕೆ ಮಾಡಬೇಕೆಂದು ಹೇಳಲಾಗಿದೆ.

ಹುದ್ದೆಗಳ ಸಂಖ್ಯೆ ಕಡಿತ ಮಾಡಬೇಕು. ಒಂದೇ ರೀತಿಯ ಕೆಲಸ ನಿರ್ವಹಿಸುವ ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ವರದಿಯಲ್ಲಿ ತಿಳಿಸಲಾಗಿದೆ. ಮೊದಲ ವರದಿಯಲ್ಲಿ ಮನೆ ಬಾಡಿಗೆ ಭತ್ಯೆ, ಕೆಲ ಹುದ್ದೆಗಳ ವೇತನ ಬಡ್ತಿಯಲ್ಲಿ ಅನ್ಯಾಯವಾಗಿದ್ದು ಸರಿಪಡಿಸಬೇಕೆಂದು ನೌಕರರ ವಲಯದಿಂದ ಒತ್ತಾಯ ಕೇಳಿ ಬಂದಿತ್ತಾದರೂ, ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನೌಕರರ ವಲಯದಿಂದ ಕೆಲವು ಶಿಫಾರಸುಗಳಿಗೆ ವಿರೋಧ ವ್ಯಕ್ತವಾಗಿದ್ದು, ಹೊಸ ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...