alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

parva_190517-3

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಬಂದಿದೆ. ಪಾರ್ವತಮ್ಮ ರಾಜ್ ಕುಮಾರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೈದ್ಯ ಸಂಜಯ್ ಕುಲಕರ್ಣಿ ಹಾಗೂ ಪುತ್ರ ರಾಘವೇಂದ್ರ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿನ್ನೆಗೆ ಹೋಲಿಸಿದ್ರೆ ಪಾರ್ವತಮ್ಮ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯಾಗಿದೆ. ನಾಳೆ ಇನ್ನಷ್ಟು ಚೇತರಿಕೆಯಾಗಲಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಪಾರ್ವತಮ್ಮ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಪಾರ್ವತಮ್ಮ ಎಲ್ಲರನ್ನೂ ಗುರುತಿಸುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

ಡಯಾಲಿಸಿಸ್ ಮುಂದುವರೆದಿದ್ದು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ. ವೆಂಟಿಲೇಟರ್ ಇರುವವರೆಗೂ ತೊಂದರೆ ಇಲ್ಲ.  ಎಲ್ಲರ ಹಾರೈಕೆಯಿಂದ ಅವರು ಗಣಮುಖರಾಗ್ತಾರೆಂಬ ಭರವಸೆ ಇದೇ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್  ನೀಡಿದ್ದಾರೆ. ವೈದ್ಯರಿಗೆ ಧನ್ಯವಾದ ಹೇಳಿದ ರಾಘವೇಂದ್ರ ರಾಜ್ ಕುಮಾರ್ ಒಳ್ಳೆಯ ಆಸ್ಪತ್ರೆಗೆ ಅಮ್ಮನನ್ನು ಸೇರಿಸಿದ್ದೇವೆ. ಅವ್ರ ಆರೋಗ್ಯದಲ್ಲಿ ಚೇತರಿಕೆಯಾಗ್ತಿರೋದು ನನಗೆ ಖುಷಿ ತಂದಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

 

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...