alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರಿಗೆ ಶುಭ ಸುದ್ದಿ! ಲಭ್ಯವಿವೆ 1.44 ಲಕ್ಷ ಆರ್.ಟಿ.ಇ. ಸೀಟು

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ(RTE) ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮಾಹಿತಿಯೊಂದು ಇಲ್ಲಿದೆ. ಈ ಬಾರಿ ಆರ್.ಟಿ.ಇ. ಅಡಿ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1.44 ಲಕ್ಷ ಸೀಟುಗಳನ್ನು ಕಾಯ್ದಿರಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಶೇ. 25 ರಷ್ಟು ಸೀಟುಗಳಿಗೆ ಉಚಿತವಾಗಿ ಪ್ರವೇಶ ನೀಡುವ ಆರ್.ಟಿ.ಇ. ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಫೆಬ್ರವರಿ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮಾರ್ಚ್ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 2 ರಂದು ಲಾಟರಿ ಪ್ರಕ್ರಿಯೆ ಅರ್ಹತಾ ಸುತ್ತಿನ ಪಟ್ಟಿ ಪ್ರಕಟವಾಗಲಿದೆ. ಏಪ್ರಿಲ್ 6 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುವುದು.

ಏಪ್ರಿಲ್ 7 ರಿಂದ 17 ರ ವರೆಗೆ ಮೊದಲ ಸುತ್ತಿನ ದಾಖಲಾತಿ ನಡೆಯಲಿದೆ. ಏಪ್ರಿಲ್ 26 ರಂದು 2 ನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಏಪ್ರಿಲ್ 27 ರಿಂದ ಮೇ 5 ರ ವರೆಗೆ 2 ನೇ ಸುತ್ತಿನ ದಾಖಲಾತಿ ನಡೆಯಲಿದೆ. ಮೇ 14 ರಂದು 3 ನೇ ಸುತ್ತಿನ ಸೀಟು ಹಂಚಿಕೆ ಮಾಡಲಿದ್ದು, ಮೇ 16 ರಿಂದ 22 ರ ವರೆಗೆ 3 ನೇ ಸುತ್ತಿನ ದಾಖಲಾತಿ ನಡೆಯಲಿದೆ.

ಈ ಬಾರಿ ಅಲ್ಪಸಂಖ್ಯಾತವಲ್ಲದ ಅನುದಾನಿತ ಶಾಲೆಗಳಲ್ಲಿಯೂ ಆರ್.ಟಿ.ಇ. ಅಡಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಪೋಷಕರು ಫೆಬ್ರವರಿ 20 ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮಗು, ಪೋಷಕರ ಆಧಾರ್ ಕಾರ್ಡ್ ಇರಬೇಕು. ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...