alex Certify
ಕನ್ನಡ ದುನಿಯಾ       Mobile App
       

Kannada Duniya

ಪರಪ್ಪನ ಅಗ್ರಹಾರ ಕರ್ಮಕಾಂಡ: ರೂಪಾರಿಂದ 2ನೇ ವರದಿ ಸಲ್ಲಿಕೆ

download

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಬಗ್ಗೆ ಡಿಐಜಿ ರೂಪಾ ಎರಡನೇ ವರದಿಯನ್ನು ಸಲ್ಲಿಸಿದ್ದಾರೆ. ರೂಪಾ ಎರಡನೇ ವರದಿಯನ್ನು ಡಿಜಿಪಿ ಸತ್ಯನಾರಾಯಣರಾವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಮತ್ತು, ಎಸಿಬಿ ಹಾಗೂ ಡಿಜಿ ಮತ್ತು ಐಜಿ ಆರ್ ಕೆ ದತ್ತಾಗೆ ಸಲ್ಲಿಸಿದ್ದಾರೆ.

ಪರಪ್ಪನ ಅಗ್ರಹಾರದ ಬಗ್ಗೆ ಎರಡು ದಿನಗಳ ಹಿಂದೆ ರೂಪಾ ಮೊದಲ ವರದಿ ಸಲ್ಲಿಸಿದ್ದರು. ಅದ್ರಲ್ಲಿ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ವಿವರವಾಗಿ ತಿಳಿಸಿದ್ದರು. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ತನಿಖೆಗೆ ಆದೇಶ ನೀಡಿದ್ದರು. ಹಾಗೆ ವರದಿಯನ್ನು ಮಾಧ್ಯಮಗಳಿಗೆ ನೀಡದಂತೆ ಸೂಚನೆ ನೀಡಿದ್ದರು.

ಸಿಎಂ ಸೂಚನೆ ಮಧ್ಯೆಯೂ ರೂಪಾ ನೀಡಿರುವ ಎರಡನೇ ವರದಿಯ ಕೆಲ ವಿಷಯಗಳು ಮಾಧ್ಯಮಗಳಿಗೆ ಲಭ್ಯವಾಗಿವೆ ಎನ್ನಲಾಗ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಕೆಲ ಪ್ರದೇಶಗಳಲ್ಲಿ ಸಿಸಿ ಟಿವಿಯಿಲ್ಲ. ಖೈದಿಗಳನ್ನು ಯಾರು ಭೇಟಿ ಮಾಡ್ತಾರೆ ಎಂಬುದು ಸರಿಯಾಗಿ ತಿಳಿಯುತ್ತಿಲ್ಲ. ವಿಜಿಟರ್ ರೂಂ ನಲ್ಲಿ ಸಿಸಿ ಟಿವಿಯಿಲ್ಲ ಎನ್ನುವುದು ವರದಿಯಲ್ಲಿದೆ ಎಂದು ಮಾಧ್ಯಮ ಮೂಲಗಳು ಹೇಳ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...