alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಸನ್ನಿ ಲಿಯೋನ್ ಗೆ ತಟ್ಟಲಿದೆ ಪ್ರತಿಭಟನೆಯ ಬಿಸಿ

ಬಹು ನೀರೀಕ್ಷಿತ ವೀರಮಾದೇವಿ ಸಿನಿಮಾದಲ್ಲಿ ಸನ್ನಿ ಲಿಯೋನ್, ಪಾತ್ರ ನಿರ್ವಹಿಸಕೂಡದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಇದನ್ನು ಮೀರಿಯೂ ಆಕೆ ಈ ಬಹುಭಾಷಾ ಚಿತ್ರದಲ್ಲಿ ನಟಿಸಿದ್ದೇ ಆದಲ್ಲಿ ಪದ್ಮಾವತ್ ಮಾದರಿಯ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.

ಈ ವೇಳೆ ಮಾತನಾಡಿದ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷ ಆರ್. ಹರೀಶ್, ನೀಲಿಚಿತ್ರಗಳಲ್ಲಿ ನಟಿಸಿರುವ ನಟಿಯೊಬ್ಬಳು ಇಂತಹ ಚಾರಿತ್ರಿಕ ಮಹತ್ವಗಳನ್ನು ಚಿತ್ರದಲ್ಲಿ ನಟಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನೇಕ ದೇವಸ್ಥಾನಗಳ ಕಟ್ಟಿಸಿರುವ ವೀರಮಾ ದೇವಿಯ ಪಾತ್ರವನ್ನು ಪೋರ್ನ್ ಸ್ಟಾರ್ ಒಬ್ಬಳು ಮಾಡುತ್ತಿರುವುದು ಸರಿಯಲ್ಲ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.

ನವೆಂಬರ್ 3ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸನ್ನಿ ಲಿಯೋನ್ ನೃತ್ಯ ಪ್ರದರ್ಶನಕ್ಕೆ ಅಡ್ಡಿಪಡಿಸುವುದಾಗಿ ವೇದಿಕೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...