alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಗೆ ಗೂಬೆ ಬಳಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ben-gube

ಬೆಂಗಳೂರು: ಸಿ.ಐ.ಡಿ. ಫಾರೆಸ್ಟ್ ವಿಭಾಗದ ಅಧಿಕಾರಿಗಳು ಹಾಗೂ ಕಾಟನ್ ಪೇಟೆ ಪೊಲೀಸರು ಗೂಬೆ ಬಳಸಿ ದರೋಡೆ ನಡೆಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬಂಧಿಸಿದ್ದಾರೆ.

ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖದೀಮರು, ಅವರ ಮನೆಗಳಿಗೆ ಗೂಬೆ ಬಿಡುತ್ತಿದ್ದರು. ಗೂಬೆ ನುಗ್ಗಿದ ಮನೆಯಲ್ಲಿ ಅಪಶಕುನವಾಗುತ್ತದೆ ಎಂದು ನಂಬಿಸಿ, ಒಂದೆರಡು ದಿನ ಮನೆಯಿಂದ ಹೊರ ಹೋಗುವಂತೆ ಹೇಳುತ್ತಿದ್ದರು.

ಬಳಿಕ ಆ ಮನೆಗಳಲ್ಲಿ ದೋಚುತ್ತಿದ್ದರು ಎನ್ನಲಾಗಿದೆ.

ಅಲ್ಲದೇ ಮನೆ ಮಾರಾಟ, ಆಸ್ತಿ ವಿವಾದಗಳನ್ನು ಗೂಬೆ ಬಿಟ್ಟು ಬಗೆಹರಿಸಿ ಹಣ ಪಡೆಯುತ್ತಿದ್ದರು. ಇವರು ಕಾಟನ್ ಪೇಟೆಯ ಲಾಡ್ಜ್ ಒಂದರಲ್ಲಿ ಗೂಬೆಯೊಂದಿಗೆ ಇದ್ದ ಸಂದರ್ಭದಲ್ಲಿ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗೂಬೆ ಬಳಸಿ ದರೋಡೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...