alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿರಾ ಕ್ಯಾಂಟೀನ್ ಗೆ ಇನ್ನೂ ಜಾಗವೇ ಸಿಕ್ಕಿಲ್ಲ!

indira

ಬೆಂಗಳೂರಿನ 198 ವಾರ್ಡ್ ಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆಯೋದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ರು. ಅಲ್ಲಿ ಕಡಿಮೆ ಬೆಲೆಗೆ ಊಟ ಉಪಹಾರ ಒದಗಿಸುವುದು ಸರ್ಕಾರದ ಉದ್ದೇಶ. ಈ ಯೋಜನೆಯ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇವೆ.

ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಆದ್ರೆ ಇದುವರೆಗೂ ಕ್ಯಾಂಟೀನ್ ತೆರೆಯಲು ಸ್ಥಳಗಳೇ ಸಿಕ್ಕಿಲ್ಲ. ಈವರೆಗೆ 45 ಜಾಗಗಳನ್ನು ಫೈನಲ್ ಮಾಡಲಾಗಿದೆ. ತರಾತುರಿಯಲ್ಲಿ ಬಿಬಿಎಂಪಿ ಕೆಲವೊಂದು ಪಾರ್ಕ್ ಮತ್ತು ಆಟದ ಮೈದಾನಗಳನ್ನು ಕೂಡ ಕ್ಯಾಂಟೀನ್ ಗಾಗಿ ಆಯ್ಕೆ ಮಾಡಿದೆ.

ಕೊನೆಗೆ ಸಾರ್ವಜನಿಕರ ವಿರೋಧ ಮತ್ತು ಕಾನೂನು ತೊಡಕನ್ನು ಗಮನದಲ್ಲಿರಿಸಿಕೊಂಡು ಅದನ್ನು ಹಿಂಪಡೆದಿದೆ. ಇನ್ನೊಂದ್ಕಡೆ ಕ್ಯಾಂಟೀನ್ ಗಳಲ್ಲಿ ಆಹಾರ ಪೂರೈಸಲು ಯಾವುದೇ ಕಂಪನಿಗೆ ಇದುವರೆಗೂ ಟೆಂಡರ್ ನೀಡಿಲ್ಲ. ಜುಲೈ 19ರಂದು ಟೆಂಡರ್ ಕರೆಯಲಾಗ್ತಿದ್ದು, ಅದು ಅಂತಿಮಗೊಂಡ ಬಳಿಕ ಯೋಜನೆ ಬಗ್ಗೆ ತರಬೇತಿ ನೀಡಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...