alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಮೀಣ ಪ್ರದೇಶದ ಜನತೆಗೆ “ಸಿಹಿ ಸುದ್ದಿ” ಕೊಟ್ಟ ಸರ್ಕಾರ

ರಾಜ್ಯ ಸರ್ಕಾರ, ಗ್ರಾಮೀಣ ಪ್ರದೇಶದ ಜನತೆಯನ್ನು ಹೈಟೆಕ್ ಗೊಳಿಸಲು ಮುಂದಾಗಿದೆ. ಇಂದು ಸ್ಮಾರ್ಟ್ ಫೋನ್ ಬಳಕೆ ವ್ಯಾಪಕವಾಗಿರುವುದನ್ನು ಗಮನದಲ್ಲಿರಿಸಿಕೊಂಡು, ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ‘ಆನ್ ಲೈನ್ ತೆರಿಗೆ’ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಿದೆ.

ಆನ್ ಲೈನ್ ತೆರಿಗೆ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ಪ್ರದೇಶದ ಜನತೆ, ಮನೆ-ನೀರಿನ ತೆರಿಗೆ ಪಾವತಿಸಲು ಗ್ರಾಮ ಪಂಚಾಯಿತಿ ಕಚೇರಿಗೆ ಅಲೆಯುವುದು ತಪ್ಪುತ್ತದಲ್ಲದೆ ದೂರದ ಸ್ಥಳದಲ್ಲಿ ವಾಸವಾಗಿರುವವರಿಗೂ ಸಹ ಅನುಕೂಲವಾಗುತ್ತದೆ.

ಆನ್ ಲೈನ್ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿ ಸಲುವಾಗಿ ಪೂರ್ವಭಾವಿಯಾಗಿ ಈಗಾಗಲೇ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ತಂತ್ರಾಂಶ ರೂಪಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಆನ್ ಲೈನ್ ತೆರಿಗೆ ಪಾವತಿಯಿಂದ ನಗದು ವಹಿವಾಟಿಗೆ ಕಡಿವಾಣ ಬೀಳಲಿದ್ದು, ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಕಂಡು ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...