alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟು ಪಡೆಯುವಾಗ ಎಚ್ಚರ! ಮಾರುಕಟ್ಟೆಗೆ ಬಂದಿದೆ ನಕಲಿ ನೋಟು

fake-note

ಯಾರಾದ್ರೂ ನಿಮಗೆ 2 ಸಾವಿರ ರೂಪಾಯಿ ನೋಟು ನೀಡ್ತಿದ್ದಾರೆಂದ್ರೆ ಸ್ವಲ್ಪ ಎಚ್ಚರವಾಗಿರಿ. ನೋಟನ್ನು ಸರಿಯಾಗಿ ಪರಿಶೀಲಿಸಿಕೊಂಡು ನೋಟು ಪಡೆಯಿರಿ. ಹೊಸ 2 ಸಾವಿರ ಮುಖ ಬೆಲೆಯ ನೋಟುಗಳು ಸರಿಯಾಗಿ ಇನ್ನೂ ಮಾರುಕಟ್ಟೆ ಪ್ರವೇಶ ಮಾಡಿಲ್ಲ. ಆಗ್ಲೆ ನಕಲಿ ನೋಟುಗಳ ಪ್ರವೇಶವಾಗಿದೆ.

ಚಿಕ್ಕಮಗಳೂರಿನಲ್ಲಿ ನಕಲಿ ನೋಟೊಂದು ಪತ್ತೆಯಾಗಿದೆ.ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವವನ ಬಳಿ ನಕಲಿ ನೋಟು ಸಿಕ್ಕಿದೆ. ಇದನ್ನು ಯಾರೋ ಪತ್ತೆ ಹಚ್ಚಿದ್ದಾರೆ. ನಕಲಿ ನೋಟಿನ ಬಣ್ಣ ಹೊಸ ನೋಟಿನ ಬಣ್ಣದಂತೆ ಇತ್ತು ಎನ್ನಲಾಗಿದೆ.

ದೇಶದ ಮಂದಿಯೆಲ್ಲ 2 ಸಾವಿರ ಮುಖಬೆಲೆಯ ನೋಟನ್ನು ಸರಿಯಾಗಿ ನೋಡಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಅಮಾಯಕರಿಗೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ. 1000 ಹಾಗೂ 500 ಮುಖಬೆಲೆಯ 300 ಕೋಟಿ ನಕಲಿ ನೋಟುಗಳು ಮಾರುಕಟ್ಟೆಯಲ್ಲಿವೆ. ಇದಕ್ಕೆ ಕಡಿವಾಣ ಹಾಕಲು ಮೋದಿ ಸರ್ಕಾರ ಹೊಸ ನೋಟುಗಳನ್ನು ಜಾರಿಗೆ ತರ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...