alex Certify
ಕನ್ನಡ ದುನಿಯಾ       Mobile App
       

Kannada Duniya

ಹೆದ್ದಾರಿ ಬಳಿಯ ಮದ್ಯದಂಗಡಿ ಬಂದ್ ಆದ್ರೂ ಗುಂಡುಪ್ರಿಯರಿಗೆ ಸಿಗ್ತಿದೆ ಮದ್ಯ

FOUR HANDS MALE AND FEMALE TOAST WITH MUGS OF BEER

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ದೂರದೊಳಗಿದ್ದ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಆದ್ರೆ ಮದ್ಯ ಪ್ರಿಯರು ಶೇ.20ರಷ್ಟು ಹೆಚ್ಚು ಹಣ ಖರ್ಚು ಮಾಡಿದ್ರೆ ಈಗಲೂ ಇಲ್ಲೇ ಗುಂಡು ಹಾಕಬಹುದು.

ಯಾಕಂದ್ರೆ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಮತ್ತು ಡಾಬಾಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮದ್ಯ ಪೂರೈಸಲು ಆರಂಭಿಸಿವೆ. ಬೆಂಗಳೂರಿನ ಉದ್ಯಮಿ ಜಿ.ನಾಗರಾಜ್ ಎಂಬುವವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಡಾಬಸ್ ಪೇಟೆಯಲ್ಲಿರುವ ಹೋಟೆಲ್ ಒಂದರಲ್ಲಿ ಅಂಗಡಿಗಿಂತ ಶೇ.15 ರಿಂದ 20ರಷ್ಟು ಹೆಚ್ಚುವರಿ ಬೆಲೆಯಲ್ಲಿ ಮದ್ಯವನ್ನು ಗ್ರಾಹಕರಿಗೆ ಪೂರೈಸಲಾಗ್ತಿದೆ ಅಂತಾ ಅವರು ತಿಳಿಸಿದ್ದಾರೆ. ಈ ರೀತಿ ಹೋಟೆಲ್ ಗಳಲ್ಲಿ ಮದ್ಯ ಪೂರೈಸುವುದು ಅಕ್ಷಮ್ಯ ಅಪರಾಧ. ಶೀಘ್ರವೇ ಈ ಬಗ್ಗೆ ಪ್ರಕರಣ ದಾಖಲಿಸಲು ಹೆಚ್ಚುವರಿ ಅಬಕಾರಿ ಆಯುಕ್ತರು ಮುಂದಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಇರುವ ಹೋಟೆಲ್ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಾ ಇರೋದು ತಮ್ಮ ಗಮನಕ್ಕೂ ಬಂದಿದೆ ಅಂತಾ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಆದ್ರೆ ಈ ಅಕ್ರಮಕ್ಕೆ ಯಾವಾಗ ಬ್ರೇಕ್ ಹಾಕ್ತಾರೋ ಕಾದು ನೋಡ್ಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...