alex Certify
ಕನ್ನಡ ದುನಿಯಾ       Mobile App
       

Kannada Duniya

Olx ಮೂಲಕ ಕಾರು ಮಾರಲು ಮುಂದಾಗಿದ್ದವರಿಗೆ ಆಗಿದ್ದೇನು..?

olx 55428olx ನಲ್ಲಿ ತಮ್ಮ ಕಾರು ಮಾರಾಟ ಮಾಡಲು ಜಾಹೀರಾತು ನೀಡಿದ್ದವರನ್ನು ಸಂಪರ್ಕಿಸಿದ್ದ ಯುವಕನೊಬ್ಬ ಟ್ರಯಲ್ ನೋಡುವ ನೆಪದಲ್ಲಿ ಕಾರಿನ ಸಮೇತ ಪರಾರಿಯಾಗಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಅಭಿಷೇಕ್ ಎಂಬವರು ತಮ್ಮ ಸ್ಕಾರ್ಪಿಯೋ ಕಾರು ಮಾರಾಟಕ್ಕಾಗಿ ಜಾಹೀರಾತು ನೀಡಿದ್ದು, ಅವರನ್ನು ಸುನೀಲ್ ಎಂಬ 19 ವರ್ಷದ ಯುವಕ ಸಂಪರ್ಕಿಸಿ ತಾನು ಕಾರು ಖರೀದಿಸಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದ. ಕಾರು ನೋಡುವ ಸಲುವಾಗಿ ವೈಟ್ ಫೀಲ್ಡ್ ಹತ್ತಿರದ ವೈದೇಹಿ ಸರ್ಕಲ್ ಬಳಿ ಬಂದ ವೇಳೆ, ತಾನು ಒಬ್ಬಂಟಿಯಾಗಿ ಟ್ರಯಲ್ ನೋಡುವುದಾಗಿ ಹೇಳಿ ಕಾರು ತೆಗೆದುಕೊಂಡು ಹೋದವನು ಮರಳಿ ಬಾರಲೇ ಇಲ್ಲ.

ಆತನ ಮೊಬೈಲ್ ಗೆ ಕರೆ ಮಾಡಿದ ವೇಳೆ ಅದು ಸ್ವಿಚಾಫ್ ಆಗಿರುವುದು ಅಭಿಷೇಕ್ ಅವರ ಗಮನಕ್ಕೆ ಬಂದಿದ್ದು, ಕೂಡಲೇ ವೈಟ್ ಫೀಲ್ಡ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಸುನೀಲ್ ಕಾರನ್ನು ಟ್ರಯಲ್ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಅಭಿಷೇಕ್ ರೆಕಾರ್ಡ್ ಮಾಡಿಕೊಂಡಿದ್ದು, ಈ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದರು.

ಇದರ ಮಾಹಿತಿಯನ್ನು ಎಲ್ಲ ಠಾಣೆಯ ಪೊಲೀಸರಿಗೆ ನೀಡಿದ್ದು, ಸರ್ಜಾಪುರದ ವಿದ್ಯಾನಗರದ ಮನೆಯೊಂದರ ಮುಂದೆ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಕಾರು ನಿಂತಿರುವುದು ಬೀಟ್ ಪೊಲೀಸರ ಗಮನಕ್ಕೆ ಬಂದಿತ್ತು. ವಿಚಾರಿಸಿದಾಗ ಅದು ಅಭಿಷೇಕ್ ಅವರ ಕಾರ್ ಎಂಬುದು ಖಚಿತವಾಯಿತು. ಇದೀಗ ಆರೋಪಿ ಸುನೀಲ್ ನನ್ನು ಪೊಲೀಸರು ಬಂಧಿಸಿದ್ದು, ಕಾರ್ ಕ್ರೇಜ್ ಹೊಂದಿದ್ದ ಆತ ಈ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...