alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ವಾಹನ ಹೊಂದಿರುವವರಿಗೆ ಶಾಕಿಂಗ್ ಸುದ್ದಿ

ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಸಂಗತಿ ನಿಮಗೆಲ್ಲಾ ತಿಳಿದೇ ಇದೆ. ಇದಕ್ಕೆ ಬಹುಮುಖ್ಯ ಕಾರಣ ರಸ್ತೆಯಲ್ಲಿ ಓಡಾಡುವ ಹಳೆಯ ವಾಹನಗಳನ್ನು ಎಂಬುದನ್ನು ರಾಜ್ಯ ವಾಯು ನಿಯಂತ್ರಣ ಮಂಡಳಿ ಕಂಡುಕೊಂಡಿದೆ.

ವಾಯುಮಾಲಿನ್ಯದಲ್ಲಿ ದೆಹಲಿಯ ಬಳಿಕ ಎರಡನೇ ಸ್ಥಾನದಲ್ಲಿ ಬೆಂಗಳೂರು ಇರುವುದರಿಂದ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯದ ಬಗ್ಗೆ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ.

ನಗರದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ 16 ಲಕ್ಷ ಪೆಟ್ರೋಲ್, ಡಿಸೇಲ್ ವಾಹನಗಳಿದ್ದು ಅವುಗಳ ಓಡಾಟವನ್ನು ಸ್ಥಗಿತಗೊಳಿಸುವಂತೆ ಕೆಎಸ್ಪಿಸಿಬಿ 2016ರಲ್ಲೇ ವರದಿ ನೀಡಿದ್ದರೂ, ಸರ್ಕಾರ ಮಾತ್ರ ಹಿಂಜರಿಯುತ್ತಿದೆ. ನಗರದಲ್ಲಿ 70 ಲಕ್ಷ ವಾಹನಗಳಿದ್ದು 32,000 ವಾಹನಗಳ ಹೊಗೆ ತಪಾಸಣೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿಸಿದ್ದು ಈ ಪೈಕಿ ಶೇ. 14 ಪೆಟ್ರೋಲ್ ವಾಹನಗಳು ಮತ್ತು ಶೇ. 25 ಡಿಸೇಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವುದು ತಿಳಿದು ಬಂದಿದೆ.

ಅದರೊಂದಿಗೆ ಪಾರ್ಕಿಗ್ ಶುಲ್ಕ ಹೆಚ್ಚಿಸಲೂ ವರದಿಯಲ್ಲಿ ಕೋರಲಾಗಿದೆ. ಕೆಎಸ್ಪಿಸಿಬಿ ಪ್ರಧಾನ ಕಾರ್ಯದರ್ಶಿಗೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ತಕ್ಷಣವೇ ಹಳೆಯ ವಾಹನಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...