alex Certify
ಕನ್ನಡ ದುನಿಯಾ       Mobile App
       

Kannada Duniya

35 ವರ್ಷದ ವಿಧವೆ ಜೊತೆ 80 ರ ವೃದ್ದನ ಮದುವೆ

ಮಂಡ್ಯ: ಸಂಬಂಧಗಳಲ್ಲಿ ಆತ್ಮೀಯತೆ ಇಲ್ಲವಾದರೆ ಏನೆಲ್ಲಾ ಸುಮಸ್ಯೆಗಳು ಹುಟ್ಟುತ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ. 80 ವರ್ಷದ ಹಿರಿಯ ವೃದ್ಧನೊಬ್ಬ 35ರ ವಿಧವೆಯನ್ನು ವಿವಾಹವಾದ ಕಾರಣಕ್ಕೆ ಆತನ ಮೊದಲ ಪತ್ನಿ ಹಾಗೂ ಮಕ್ಕಳು ಹಲ್ಲೆ ನಡೆಸಿರುವ ಪ್ರಕರಣ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

ನಿವೃತ್ತ ಶಿಕ್ಷಕ ಹಾಗೂ ಸಾಹಿತಿಯಾಗಿರುವ ಎನ್.ಎಂ. ಮಹಮ್ಮದ್ ಗೌಸ್, ತನ್ನ ಮೊದಲ ಪತ್ನಿ ಹಾಗೂ ಮಕ್ಕಳಿಂದ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ 35ರ ವಿಧವೆಯನ್ನು ಮದುವೆಯಾಗಿದ್ದರು. ಮರು ಮದುವೆಯಾದ ವಿಷಯ ತಿಳಿದ ಮೊದಲ ಪತ್ನಿ ಹಾಗೂ ಮಕ್ಕಳು ವಿಧವೆ ಅಬ್ಜಾ ಮೇಲೆ ಹಲ್ಲೆ ನಡೆಸಿದ್ದಾರೆ.

ಗೌಸ್ ನ ಮೊದಲ ಪತ್ನಿ ಅಮೀನಾ, ಅಬ್ಜಾಳಿಗೆ ಚಪ್ಪಲಿಯಿಂದ ಹೊಡೆದು ಈ ತಕ್ಷಣವೇ ಮನೆ ಬಿಟ್ಟು ಹೋಗುವಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಬ್ಜಾ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲ ಪತ್ನಿ ಹಾಗೂ ಮಕ್ಕಳು ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂಬ ಕಾರಣಕ್ಕೆ ಎರಡು ಹೆಣ್ಣು ಮಕ್ಕಳಿರುವ ನೂರ್ ಅಬ್ಜಾರನ್ನು ಗೌಸ್ ಮದುವೆಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...