alex Certify
ಕನ್ನಡ ದುನಿಯಾ       Mobile App
       

Kannada Duniya

ಅಡುಗೆಯಲ್ಲಿ ಜಾಸ್ತಿಯಾಯ್ತು ಎಣ್ಣೆ: ಪತಿ ಮಾಡಿದ್ದೇನು..?

ಕಲಬುರಗಿ: ಅಡುಗೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗುವುದು ಸಹಜ. ಇಷ್ಟೇ ವಿಚಾರಕ್ಕೆ ಪತಿರಾಯನೊಬ್ಬ ಪತ್ನಿಯ ಮೇಲೆ ಸುಡುವ ಎಣ್ಣೆಯನ್ನು ಎರಚಿದ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಭೀಮಾಶಂಕರ್, ಪತ್ನಿ ಪ್ರಿಯಾಂಕಾಗೆ(25) ಎಣ್ಣೆ ಎರಚಿದ ಆರೋಪಿ. ಗಂಭೀರವಾಗಿ ಗಾಯಗೊಂಡಿರುವ ಪ್ರಿಯಾಂಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

3 ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು, 1 ಮಗು ಇದೆ. ಭೀಮಾಶಂಕರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದ್ದಕ್ಕೆ, ಸುಡುವ ಎಣ್ಣೆಯನ್ನು ಪತ್ನಿಯ ಮೇಲೆ ಎರಚಿದ್ದಾನೆ.

ಪ್ರಿಯಾಂಕಾಗೆ ಮುಖ ಸೇರಿ ದೇಹದ ಭಾಗಗಳಿಗೆ ಹಾನಿಯಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...