alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಇಳಿಯುತ್ತಾ ಪೆಟ್ರೋಲ್, ಡೀಸೆಲ್ ಬೆಲೆ..?

petrol_2685380f_2815536d

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೇಡಿಕೆ ಕುಸಿಯುತ್ತಿದ್ದು, ಈ ಹಿನ್ನಲೆಯಲ್ಲಿ ಸದ್ಯದಲ್ಲಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.

ಹೌದು. ಪ್ರತಿ ನಿತ್ಯದ ಜಾಗತಿಕ ಸರಬರಾಜಿನ ಬೇಡಿಕೆಯಲ್ಲಿ 0.3 ಮಿಲಿಯನ್ ಬ್ಯಾರಲ್ ಕಡಿತಗೊಂಡಿದ್ದು, ಅದರಲ್ಲಿಯೂ ಮಾರ್ಚ್ ಬಳಿಕ ಪ್ರತಿನಿತ್ಯ ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ 96.1 ಮಿಲಿಯನ್ ಬ್ಯಾರೆಲ್ ತೈಲ ಮಾತ್ರ ಸರಬರಾಜಾಗುತ್ತಿದೆ. ಹಾಗಾಗಿ ಪ್ರತೀ ಬ್ಯಾರಲ್ ತೈಲ ದರದಲ್ಲಿ 1.14 ಡಾಲರ್ ನಷ್ಟು ಮೌಲ್ಯ ಕುಸಿದಿದ್ದು, ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ತೈಲ 40.36 ಡಾಲರ್ ಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಅಲ್ಲದೇ ಕಚ್ಚಾ ತೈಲದ ಉತ್ಪಾದನೆಯೂ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ಮತ್ತಷ್ಟು ದರ ಕುಸಿತ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದಷ್ಟೇ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕೊಂಚ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...