alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಿಷನ್ ಆಸೆಗೆ ಬಿದ್ದು 83 ಲಕ್ಷ ರೂ. ಕಳೆದುಕೊಂಡ್ರು

new-n

ಬೆಂಗಳೂರು: ಕಮಿಷನ್ ಆಸೆಗೆ ಹಳೆ ನೋಟುಗಳನ್ನು ಬದಲಿಸಿಕೊಡಲು ಮುಂದಾಗಿದ್ದ ಉದ್ಯಮಿಗಳಿಬ್ಬರು, ಬರೋಬ್ಬರಿ 83 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು ಜೆ.ಪಿ.ನಗರದ ಉದ್ಯಮಿಗಳಿಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನ ಬಳಿ 1 ಕೋಟಿ ರೂ. ಹಳೆ ನೋಟುಗಳಿದ್ದು, ಶೇ. 20 ರಷ್ಟು ಕಮಿಷನ್ ಪಡೆದು ಅವುಗಳ ಬದಲಿಗೆ ಹೊಸ ನೋಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿ, ಆಸೆಗೆ ಬಿದ್ದ ಉದ್ಯಮಿಗಳು 2000 ರೂ. ಹಾಗೂ 100 ರೂ. ಮುಖ ಬೆಲೆಯ 83 ಲಕ್ಷ ರೂ. ಇರುವುದಾಗಿ ಹೇಳಿದ್ದಾರೆ.

ಆ ನಂತರದಲ್ಲಿ ಐವರು ಅಪರಿಚಿತರು ಉದ್ಯಮಿಗಳ ಮನೆಗೆ ಬಂದಿದ್ದು, ತಾವು ಸಿ.ಸಿ.ಬಿ. ಅಧಿಕಾರಿಗಳೆಂದು ಹೇಳಿಕೊಂಡು, ನಿಮ್ಮ ಮನೆಯಲ್ಲಿ ಹಣ ಇರುವ ಮಾಹಿತಿ ಸಿಕ್ಕಿದೆ. ಅದನ್ನು ಒಪ್ಪಿಸಿ ಎಂದು ಬೆದರಿಸಿದ್ದಾರೆ. ಉದ್ಯಮಿಗಳನ್ನು ಹಣದ ಸಮೇತ ಕಾರಿನಲ್ಲಿ ಕರೆದುಕೊಂಡು ಹೋಗಿ, ದಾರಿ ಮಧ್ಯದಲ್ಲೇ ಇಬ್ಬರನ್ನು ಇಳಿಸಿ ಹಣದೊಂದಿಗೆ ಪರಾರಿಯಾಗಿದ್ದಾರೆ.

ಕಮಿಷನ್ ಆಸೆಗೆ ಬಿದ್ದು ಹಣ ಕಳೆದುಕೊಂಡ ಉದ್ಯಮಿಗಳು ಜೆ.ಪಿ.ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...