alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಕಟ್ಟುಕಥೆ..?

ಬೆಂಗಳೂರಿನ ಶಾಲೆಯೊಂದರಲ್ಲಿ 4 ವರ್ಷದ ಬಾಲಕಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಸುಳ್ಳು ಅಂತಾ ಪೊಲೀಸರು ತಿಳಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಬಾಲಕಿ ಮೇಲೆ ದೌರ್ಜನ್ಯ ನಡೆದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಬಾಲಕಿಯ ಹೆತ್ತವರು ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಾಲೆಯ ಭದ್ರತಾ ಸಿಬ್ಬಂದಿ ಈ ಕೃತ್ಯ ಎಸಗಿದ್ದಾರೆ ಅಂತಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಐವರು ಸೆಕ್ಯೂರಿಟಿ ಗಾರ್ಡ್ ಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಾಲೆಯಲ್ಲಿ ಅಳವಡಿಸಿರುವ ಎಲ್ಲಾ ಸಿಸಿ ಟಿವಿ ದೃಶ್ಯ ಪರಿಶೀಲಿಸಿದ್ದಾರೆ.

ಬಾಲಕಿ ಶಾಲೆಗೆ ಆಗಮಿಸುವುದರಿಂದ ಹಿಡಿದು ಅಲ್ಲಿಂದ ಹೊರ ಹೋಗುವವರೆಗಿನ ಎಲ್ಲಾ ದೃಶ್ಯಗಳೂ ಸಿಸಿ ಟಿವಿಯಲ್ಲಿದ್ದು, ಹೆತ್ತವರು ಆರೋಪ ಮಾಡಿದಂತಹ ಯಾವುದೇ ಘಟನೆಗಳು ನಡೆದಿಲ್ಲ. ಆಕೆಯನ್ನು ಭದ್ರತಾ ಸಿಬ್ಬಂದಿ ಮಾತನಾಡಿಸಿಯೂ ಇಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.

ಸಿಸಿ ಟಿವಿಯ ದೃಶ್ಯಾವಳಿಗಳನ್ನು ಮಗುವಿನ ಪೋಷಕರು ಹಾಗು ಇತರೆ 100 ಪೋಷಕರಿಗೆ ಪೊಲೀಸರು ತೋರಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಮನೆಗೆ ಬಂದ ಮಗು ವಾಂತಿ ಮಾಡಿಕೊಂಡಿತ್ತು. ಏನಾಗಿದೆ ಅಂತಾ ತಾಯಿ ವಿಚಾರಿಸಿದಾಗ ವಾಚ್ಮನ್ ಅಂಕಲ್ ನನಗೆ ಹೊಡೆದಿದ್ದಾರೆ, ಬಾತ್ ರೂಮಿನಲ್ಲಿ ನನ್ನ ಪ್ಯಾಂಟ್ ಬಿಚ್ಚಿದ್ದಾರೆ ಅಂತಾ ಹೇಳಿತ್ತು.

ನಂತರ ಆಸ್ಪತ್ರೆಗೆ ಕರೆದೊಯ್ದ ಪೋಷಕರು, ಪೊಲೀಸರಿಗೂ ದೂರು ನೀಡಿದ್ದರು. ಆದ್ರೆ ಊಟ ಮಾಡಿ 15 ನಿಮಿಷಗಳ ನಂತರ ಮಗು ಶಾಲೆಯಲ್ಲೇ ಮಲಗಿಬಿಟ್ಟಿತ್ತು. ನಂತರ ಆಕೆಗೆ ವಾಂತಿ ಶುರುವಾಗಿದೆ. ಹಾಗಾಗಿ ಫುಡ್ ಪಾಯ್ಸನ್ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗುರುಗ್ರಾಮದಲ್ಲಿ ನಡೆದ ಘಟನೆಯನ್ನು ಟಿವಿಯಲ್ಲಿ ವೀಕ್ಷಿಸಿದ್ದ ಮಗು, ಅದನ್ನೇ ಹೇಳಿದೆ ಎಂಬ ಅನುಮಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...