alex Certify
ಕನ್ನಡ ದುನಿಯಾ       Mobile App
       

Kannada Duniya

ಜೋರಾಗಿತ್ತು ಹೊಸ ವರ್ಷಾಚರಣೆ ಸಂಭ್ರಮ

h-n-y-ben

ಬೆಂಗಳೂರು: ಕಲರ್ ಫುಲ್ ಲೈಟಿಂಗ್ಸ್, ಹುಚ್ಚೆಬ್ಬಿಸೋ ಮ್ಯೂಸಿಕ್, ಯಾರು ತಾನೇ ಸುಮ್ನಿರ್ತಾರೆ ಹೇಳಿ. ಎಲ್ಲರೂ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ.

ಈ ದೃಶ್ಯಗಳು ಕಂಡು ಬಂದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಬ್ರಿಗೇಡ್ ರೋಡ್, ಎಂ.ಜಿ. ರೋಡ್ ಗಳಲ್ಲಿ. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಇಡೀ ರಸ್ತೆಗಳೇ ಕಲರ್ ಫುಲ್ ಆಗಿದ್ದವು.

ಅಬ್ಬರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಜನ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇವರೆಡು ರಸ್ತೆ ಮಾತ್ರವಲ್ಲದೇ, ಪ್ರತಿಷ್ಠಿತ ಹೋಟೆಲ್, ಪಬ್ ಗಳಲ್ಲಿಯೂ ನ್ಯೂ ಇಯರ್ ಸಂಭ್ರಮ ಜೋರಾಗಿತ್ತು.

ಮೈಸೂರು ಅರಮನೆಯಲ್ಲಿ ರಾತ್ರಿ 12 ಗಂಟೆಗೆ ಲೈಟಿಂಗ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ರಾಜ್ಯ ಮಾತ್ರವಲ್ಲದೇ, ದೇಶ ವಿದೇಶಗಳಲ್ಲಿಯೂ ಸಂಭ್ರಮಾಚರಣೆ ಜೋರಾಗಿತ್ತು.

ಎಲ್ಲಾ ಕಡೆ ಕಣ್ಣು ಕೋರೈಸುವ ಲೈಟಿಂಗ್ಸ್ ಕಲರ್ ಫುಲ್ ರಾತ್ರಿಯಿಂದಾಗಿ ಹೊಸ ಲೋಕವೇ ಸೃಷ್ಠಿಯಾದಂತಿತ್ತು.

ಹಾಡು, ಡ್ಯಾನ್ಸ್, ಮೋಜು, ಮಸ್ತಿ ರಂಗೇರಿತ್ತು. ಮಧ್ಯರಾತ್ರಿಯಾಗುತ್ತಲೇ, ಜನ ಜೋರಾಗಿ ಹ್ಯಾಪಿ ನ್ಯೂ ಇಯರ್ ಎಂದು ಕೂಗಿ, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಕೆಲವೆಡೆಯಂತೂ ಕಲರ್ ಫುಲ್ ಪಟಾಕಿಗಳ ಚಿತ್ತಾರ ಬಾನಂಗಳದಲ್ಲಿ ಕಂಡು ಬಂದು ಸಂಭ್ರಮವನ್ನು ಹೆಚ್ಚು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...