alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವರ ಖಾತೆ ಫೈನಲ್: ಯಾರಿಗೆ ಯಾವ ಖಾತೆ, ಇಲ್ಲಿದೆ ಪಟ್ಟಿ

ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಿದ್ದ ಮೈತ್ರಿಕೂಟ ಸರ್ಕಾರದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಯಾರ್ಯಾರಿಗೆ ಯಾವ ಖಾತೆ ಲಭಿಸಿದೆ ಎಂಬುದರ ಪಟ್ಟಿ ಇಲ್ಲಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಣಕಾಸು ಇಲಾಖೆ ಸೇರಿದಂತೆ ಗುಪ್ತವಾರ್ತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ವಹಿಸಿಕೊಂಡಿದ್ದು, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿದ್ದಾರೆ.

ಹೆಚ್.ಡಿ. ರೇವಣ್ಣನವರಿಗೆ ಲೋಕೋಪಯೋಗಿ, ಡಿ.ಕೆ. ಶಿವಕುಮಾರ್-ಜಲಸಂಪನ್ಮೂಲ ಹಾಗೂ ಉನ್ನತ ಶಿಕ್ಷಣ, ಆರ್. ವಿ.ದೇಶಪಾಂಡೆ- ಕಂದಾಯ, ಕೆ.ಜೆ. ಜಾರ್ಜ್-ಬೃಹತ್ ಕೈಗಾರಿಕೆ, ಬಂಡೆಪ್ಪ ಕಾಶೆಂಪುರ್-ನಗರಾಭಿವೃದ್ಧಿ ಇಲಾಖೆ, ಸಿ.ಎಸ್. ಪುಟ್ಟರಾಜು-ಸಣ್ಣ ನೀರಾವರಿ, ಶಿವಶಂಕರ್ ರೆಡ್ಡಿ-ಕೃಷಿ, ಪ್ರಿಯಾಂಕ್ ಖರ್ಗೆ-ಸಮಾಜ ಕಲ್ಯಾಣ ಖಾತೆಯ ಸಚಿವರಾಗಿದ್ದಾರೆ.

ವೆಂಕಟರಮಣಪ್ಪನವರಿಗೆ ಕಾರ್ಮಿಕ ಖಾತೆ, ರಾಜಶೇಖರ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ, ಪುಟ್ಟರಂಗಶೆಟ್ಟಿ- ಹಿಂದುಳಿದ ವರ್ಗಗಳ ಕಲ್ಯಾಣ, ಶಂಕರ್- ಅರಣ್ಯ ಇಲಾಖೆ, ಜಯಮಾಲಾ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಮೇಶ್ ಜಾರಕಿಹೊಳಿ-ಪೌರಾಡಳಿತ ಮತ್ತು ಯುವಜನ ಸೇವೆ ಮತ್ತು ಕ್ರೀಡೆ, ಜಿ. ಟಿ. ದೇವೇಗೌಡ ಉನ್ನತ ಶಿಕ್ಷಣ,  ಜಮೀರ್ ಅಹಮದ್ ಖಾನ್- ಆಹಾರ ಮತ್ತು ನಾಗರಿಕ ಸರಬರಾಜು, ವಕ್ಬ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿದ್ದಾರೆ.

ಎನ್. ಮಹೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಡಿ.ಸಿ. ತಮ್ಮಣ್ಣನವರಿಗೆ ಸಾರಿಗೆ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿವಾನಂದ ಪಾಟೀಲ್- ಆರೋಗ್ಯ, ಪುಟ್ಟರಂಗಶೆಟ್ಟಿ- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...