alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಮಹಿಳೆಯ ಹೀನಾಯ ಕೃತ್ಯ

ಶಿವಮೊಗ್ಗ : ಮಹಿಳೆಯೊಬ್ಬಳು ನಾಲ್ಕು ದಿನದ ಹಸುಗೂಸನ್ನು ಚರಂಡಿ ಬದಿಯಲ್ಲಿ ಇಟ್ಟು ಹೋದ ಅಮಾನವೀಯ ಘಟನೆ ಪೆನ್ಶನ್ ಮೊಹಲ್ಲಾ 2ನೇ ತಿರುವಿನಲ್ಲಿ ನಡೆದಿದೆ.

ಬೆಳಗಿನ ಜಾವ ಮಹಿಳೆ ಮತ್ತು ಪುರುಷ ನಡೆದುಕೊಂಡು ಬಂದಿದ್ದು, ಎರಡು ಕಾರುಗಳ ನಡುವೆ ಮಹಿಳೆ ಹಸುಗೂಸನ್ನು ಇಟ್ಟಿದ್ದಾಳೆ. ಬಳಿಕ ಇಬ್ಬರು ಅಲ್ಲಿಂದ ತೆರಳಿದ್ದಾರೆ. ಘಟನೆಯ ದೃಶ್ಯಗಳೆಲ್ಲ ಸಮೀಪದ ಮನೆಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೆಳಿಗ್ಗೆ ಮಗುವನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಸುಗೂಸನ್ನು ರಕ್ಷಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗುವಿನ ಕಾಲಿನಲ್ಲಿ ಟ್ಯಾಗ್ ಹಾಕಲಾಗಿದ್ದು, ಮಾರ್ಚ್ 20 ರಂದು ಹಾಸನದ ಶ್ರೀ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದೆ ಎಂದು ಬರೆಯಲಾಗಿದೆ. ತಾಯಿ ಹೆಸರು ಧನಲಕ್ಷ್ಮಿ ಎಂದು ಟ್ಯಾಗ್ ನಲ್ಲಿದ್ದು ಕೋಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...