alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಯಲ್ಲಿ ಅಂತ್ಯವಾಯ್ತು ಜಾತ್ರೆಯ ಫ್ಲೆಕ್ಸ್ ಫೈಟ್

ಬೆಂಗಳೂರು: ಊರ ದೇವರ ಜಾತ್ರೆಯಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ, ಆರಂಭವಾದ ಜಗಳದಲ್ಲಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ.

ನೆಲಮಂಗಲದ ಗೊಲ್ಲರಹಳ್ಳಿ ಆಂಜನೇಯಸ್ವಾಮಿ ದೇವರ ಜಾತ್ರೆಯಲ್ಲಿ ಮಾರುತಿ ಎಂಬುವವರು ಫ್ಲೆಕ್ಸ್ ಹಾಕಿದ್ದು, ಅದರಲ್ಲಿ ತಮ್ಮ ಫೋಟೋ ಹಾಕಿಲ್ಲದ ಕಾರಣ ಮಂಜುನಾಥ್ ಎಂಬುವವರು ಜಗಳವಾಡಿದ್ದಾರೆ.

ಮಾರುತಿ ಮತ್ತು ಶಶಿಕುಮಾರ್ ಫ್ಲೆಕ್ಸ್ ಬಳಿ ಇದ್ದ ವೇಳೆ ಮಂಜುನಾಥ್, ರವಿ ಮೊದಲಾದವರು ದಾಳಿ ಮಾಡಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಮಾರುತಿ ಸಾವನ್ನಪ್ಪಿದ್ದು, ಗಾಯಗೊಂಡಿರುವ ಶಶಿಕುಮಾರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ನೆಲಮಂಗಲ ಠಾಣೆ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...