alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ, ಐವರಿಗೆ ಗಂಭೀರ ಗಾಯ

ಬೆಂಗಳೂರು: ಹೆಜ್ಜೇನು ದಾಳಿಗೆ ವ್ಯಕ್ತಿಯೊಬ್ಬರು ಸಾವು ಕಂಡು ಐವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ನಲ್ಲೇನಹಳ್ಳಿ ಪಾಳ್ಯದಲ್ಲಿ ನಡೆದಿದೆ.

ರಾಮೇನಹಳ್ಳಿ ನಿವಾಸಿ ರಾಮಕೃಷ್ಣಯ್ಯ(46) ಮೃತಪಟ್ಟವರು. ಮನೆಯ ಗೃಹಪ್ರವೇಶದ ಆಹ್ವಾನ ಪತ್ರಿಕೆ ಕೊಡಲು ಬಂದಿದ್ದ ಅವರು ಹೆಜ್ಜೇನು ದಾಳಿಗೆ ಬಲಿಯಾಗಿದ್ದಾರೆ.

ಘಟನೆಯಲ್ಲಿ ನಾರಾಯಣಪ್ಪ, ಲಕ್ಷ್ಮಮ್ಮ, ಚೈತ್ರಾ, ಮುನಿರಾಜು, ಕಾವ್ಯ ಎಂಬುವವರು ಗಾಯಗೊಂಡಿದ್ದು, ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ನಲ್ಲೇನಹಳ್ಳಿ ಗ್ರಾಮದ ಅಶ್ವಥಕಟ್ಟೆ ಬಳಿ ಸಾಂಬ್ರಾಣಿ ಹಚ್ಚಿದ ಕಾರಣ ಜೇನು ಹುಳಗಳು ಏಕಾಏಕಿ ದಾಳಿ ಮಾಡಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...