alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಯ ಬೆಲೆಗೆ ಹರಾಜಾಯ್ತು ಶ್ರೀ ತಿಪ್ಪೇರುದ್ರಸ್ವಾಮಿ ಮುಕ್ತಿ ಬಾವುಟ

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ರಥೋತ್ಸವಕ್ಕೆ ಮೊದಲು ಮುಕ್ತಿ ಬಾವುಟವನ್ನು ಹರಾಜು ಹಾಕಲಾಗುತ್ತದೆ. ಈ ಮುಕ್ತಿ ಬಾವುಟವನ್ನು ಖರೀದಿಸಿದವರಿಗೆ ಆರೋಗ್ಯ, ಸಂಪತ್ತು ವೃದ್ಧಿಸುತ್ತದೆ. ಬಾವುಟ ಪಡೆಯುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಉದ್ಯಮಿಗಳು, ರಾಜಕಾರಣಿಗಳು ಮುಕ್ತಿ ಬಾವುಟವನ್ನು ಪಡೆಯಲು ಪೈಪೋಟಿ ನಡೆಸುತ್ತಾರೆ. ಹೆಚ್ಚಿನ ಬೆಲೆ ನೀಡಿ ಅದನ್ನು ಖರೀದಿಸುತ್ತಾರೆ.

ಈ ಬಾರಿ ತಿಪ್ಪೇರುದ್ರಸ್ವಾಮಿಗಳ ಮುಕ್ತಿ ಬಾವುಟವನ್ನು 72 ಲಕ್ಷ ರೂ.ಗೆ ಬೆಂಗಳೂರಿನ ಉದ್ಯಮಿ ಮುಖೇಶ್ ಕುಮಾರ್ ಖರೀದಿಸಿದ್ದಾರೆ. ಮೈಸೂರಿನ ಉದ್ಯಮಿ ಸೋಮಣ್ಣ 2016 ರಲ್ಲಿ 60 ಲಕ್ಷ ರೂ., 2017 ರಲ್ಲಿ 71 ಲಕ್ಷ ರೂ. ನೀಡಿ ಮುಕ್ತಿ ಬಾವುಟವನ್ನು ಖರೀದಿಸಿದ್ದರು.

ಈ ಬಾರಿ ದಾಖಲೆಯ 72 ಲಕ್ಷ ರೂ.ಗೆ ಮುಖೇಶ್ ಕುಮಾರ್ ಮುಕ್ತಿ ಬಾವುಟ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...