alex Certify
ಕನ್ನಡ ದುನಿಯಾ       Mobile App
       

Kannada Duniya

ನಕ್ಸಲ್ ಆರೋಪ ಹೊತ್ತಿದ್ದ ದೇವೇಂದ್ರ ಖುಲಾಸೆ

ಉಡುಪಿ: ನಕ್ಸಲ್ ಆರೋಪ ಹೊತ್ತಿದ್ದ ದೇವೇಂದ್ರ ಅವರನ್ನು ಎಲ್ಲಾ ಪ್ರಕರಣಗಳಿಂದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.

ಈದು ಎನ್ ಕೌಂಟರ್ ನ 5 ನೇ ಆರೋಪಿಯಾಗಿದ್ದ ದೇವೇಂದ್ರ 8 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಈದು ಎನ್ ಕೌಂಟರ್ ರಾಜ್ಯದಲ್ಲಿ ನಡೆದ ಮೊದಲ ನಕ್ಸಲ್ ಎನ್ ಕೌಂಟರ್ ಆಗಿದ್ದು, ಪಾರ್ವತಿ ಮತ್ತು ಹಾಜಿಮಾ ಅವರನ್ನು ಹತ್ಯೆ ಮಾಡಲಾಗಿತ್ತು.

ಆಗ ನಾಪತ್ತೆಯಾಗಿದ್ದ ದೇವೇಂದ್ರರನ್ನು 2009 ರಲ್ಲಿ ಆಂಧ್ರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಅವರ ವಿರುದ್ಧ 24 ಪ್ರಕರಣ ದಾಖಲಾಗಿದ್ದವು. ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ಎಲ್ಲಾ ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...