alex Certify
ಕನ್ನಡ ದುನಿಯಾ       Mobile App
       

Kannada Duniya

“ರೈತನ ಮಗ ಕುಮಾರಸ್ವಾಮಿಗೆ ಆಡಳಿತ ಮಾಡಲು ಬಿಡಿ”: ನಂಜಾವಧೂತ ಶ್ರೀ

ಬೆಂಗಳೂರು: ಒಕ್ಕಲುತನದ ಕುಟುಂಬದ ಕುಮಾರಸ್ವಾಮಿಯವರಿಗೆ ಸ್ವತಂತ್ರವಾಗಿ ರಾಜ್ಯ ನಡೆಸುವ ಅವಕಾಶವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿಕೊಡಬೇಕೆಂದು ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಮಹಾಸ್ವಾಮಿಗಳು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರದಂದು ಅಧಿಕಾರ ವಹಿಸಿಕೊಂಡ ಹೆಚ್.ಡಿ. ಕುಮಾರಸ್ವಾಮಿ, ಇಂದು ಬೆಳಗ್ಗೆ ಬೆಂಗಳೂರಿನ ಉಲ್ಲಾಳದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀ ನಂಜಾವಧೂತ ಸ್ವಾಮಿಗಳನ್ನು ಭೇಟಿಯಾಗಿ, ಬಯಲು ಪ್ರದೇಶದ ನೀರಾವರಿ ಯೋಜನೆ ಹಾಗೂ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಂತಹ ಶಾಶ್ವತ ನೀರಾವರಿ ಯೋಜನೆಗಳನ್ನು ಕಾಣದಂತಹ ಜಿಲ್ಲೆಗಳಿಗೆ ರೈತರ ಮಗ ಕುಮಾರಸ್ವಾಮಿಯವರು ನೀರು ಹರಿಸುವ ವಿಶ್ವಾಸ ನನಗಿದೆ ಎಂದರು. ರಾಜ್ಯದ ನೂತನ ಮುಖ್ಯಮಂತ್ರಿ ಅವರ ಆಡಳಿತ ವೈಖರಿಯಲ್ಲಿ ಯಾವುದೇ ಬೇರೆ ನಾಯಕರು ಅಡಚಣೆ ಮಾಡದೆ, ರಾಜ್ಯದ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕೆಂದು ಈ ಮೂಲಕ ಕರೆ ನೀಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...