alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದಲ್ಲಿ ಮ್ಯಾಜಿಕ್ ಮಾಡಲಿದ್ಯಾ ನಮೋ ಆಪ್?

ಕರ್ನಾಟಕ ವಿಧಾನಸಭೆ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಣ್ಣಿಟ್ಟಿದ್ದಾರೆ. ಗೆಲುವಿಗಾಗಿ ರಣತಂತ್ರ ಹೆಣೆದು ಅದನ್ನು ಕಾರ್ಯಕತಗೊಳಿಸುವಲ್ಲಿ ಯಶಸ್ವಿಯಾಗ್ತಿದ್ದಾರೆ. ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚೆಚ್ಚು ಮತದಾರರನ್ನು ಸೆಳೆಯುವ ಯತ್ನ ನಡೆಸುತ್ತಿದ್ದಾರೆ. 2014ರ ಲೋಕಸಭೆ ಚುನಾವಣೆ ಗೆಲುವಿಗೆ ಸಾಮಾಜಿಕ ಜಾಲತಾಣ ನೆರವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ನಮೋ ಆಪ್ ಕರ್ನಾಟಕ ಚುನಾವಣೆಯಲ್ಲಿ ಎಷ್ಟು ಪರಿಣಾಮ ಬೀರುತ್ತೆ ಎಂಬುದು ಈಗಿರುವ ಪ್ರಶ್ನೆ. ಈಗಾಗಲೇ ನಮೋ ಆಪ್ ಕರ್ನಾಟಕದ ರಸ್ತೆಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಜೊತೆಯೊಂದೇ ಅಲ್ಲ ನಮೋ ಆಪ್ ಮೂಲಕ ನರೇಂದ್ರ ಮೋದಿ ಕರ್ನಾಟಕ ರೈತರ ಜೊತೆಯೂ ಮಾತುಕತೆ ನಡೆಸಿದ್ದಾರೆ.

2015ರಲ್ಲಿ ನಮೋ ಆಪ್ ಬಿಡುಗಡೆಯಾದ್ರೂ ನೋಟು ನಿಷೇಧದ ನಂತ್ರ ಇದು ಹೆಚ್ಚು ಪ್ರಚಾರಕ್ಕೆ ಬಂತು. ಆಪ್ ಡೌನ್ಲೋಡ್ ಮಾಡಿಕೊಂಡು ನೋಟು ನಿಷೇಧದ ಸಮಸ್ಯೆ ಬಗ್ಗೆ ನೇರವಾಗಿ ತಮ್ಮ ಬಳಿ ದೂರು ಸಲ್ಲಿಸಲು ಮೋದಿ ಅವಕಾಶ ನೀಡಿದ್ದರು. ಆ ನಂತ್ರದ ದಿನಗಳಲ್ಲಿ ಸರ್ಕಾರದ ಅನೇಕ ಯೋಜನೆಗಳು ನಮೋ ಆಪ್ ನಲ್ಲಿ ಸೇರಲ್ಪಟ್ಟಿವೆ.

ಆಪ್ ನಲ್ಲಿ ಮನ್ ಕಿ ಬಾತ್ ಹಾಗೂ ಎಗ್ಸಾಂ ವಾರಿಯರ್ಸ್ ಪುಸ್ತಕದ ಪ್ರಚಾರವನ್ನೂ ಮೋದಿ ಮಾಡ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಈ ಆಪ್ ಡೌನ್ಲೋಡ್ ಕಡ್ಡಾಯ. 10 ಮಿಲಿಯನ್ ಗೂ ಹೆಚ್ಚು ಬಾರಿ ಆಪ್ ಡೌನ್ಲೋಡ್ ಆಗಿದೆ. ಆದ್ರೆ ಇದ್ರಿಂದ ಅಮಿತ್ ಶಾ ತೃಪ್ತಿಗೊಂಡಿಲ್ಲ. ಪ್ರತಿ ಜಿಲ್ಲೆಯಲ್ಲೂ 100,000 ಡೌನ್ಲೋಡ್ ಆಗಬೇಕೆಂದು ಅಮಿತ್ ಶಾ ಹೇಳಿದ್ದಾರೆ.

ನಮೋ ಆಪ್ ಪ್ರಚಾರ ಕಾಂಗ್ರೆಸ್ ಗೆ ಭಯಹುಟ್ಟಿಸಿದೆ. ಆಪ್ ವಿರುದ್ಧ ರಾಹುಲ್ ಗಾಂಧಿ ಈಗಾಗಲೇ ತಮ್ಮ ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಮತದಾರರನ್ನು ಗುರುತಿಸಿ ಮತಗಟ್ಟೆಗೆ ಕರೆದೊಯ್ಯಲು ಈ ಆಪ್ ನೆರವಾಗಲಿದೆ. ನಮೋ ಆಪ್ ಹೊಸ ಶಕೆ ಶುರುಮಾಡಿದೆ ಎಂದ್ರೆ ತಪ್ಪಾಗಲಾರದು. ಆದ್ರೆ ಇದನ್ನೇ ನಂಬಲು ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್ ಭದ್ರಕೋಟೆ. ಮತದಾರರು ನಮೋಗೆ ಶರಣಾಗ್ತಾರಾ ಇಲ್ಲ ಸಂಪ್ರದಾಯದಂತೆ ಹಳೆ ಪಕ್ಷಕ್ಕೆ ಮತ ಹಾಕ್ತಾರಾ ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...