alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗಮಣಿ ಪ್ರಕರಣಕ್ಕೆ ಟ್ವಿಸ್ಟ್

gudi-nag

ಚಿಕ್ಕಬಳ್ಳಾಪುರ: ಗುಡಿಬಂಡೆಯ ಚೌಡೇಶ್ವರಿ ದೇವಾಲಯದಲ್ಲಿ ನಾಗಮಣಿ ಕಾಣಿಸಿಕೊಂಡ ಪ್ರಕರಣ ತಿರುವು ಪಡೆದುಕೊಂಡಿದೆ.

ದೇವಾಲಯದ ಪೂಜಾರಿಯೇ ಹಾವು ಹಾಗೂ ಎಲ್.ಇ.ಡಿ. ಬಲ್ಬ್ ತಂದಿಟ್ಟಿರುವುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ.

ಪ್ರಶಾಂತ್ ಎಂಬಾತ ಈ ದೇವಾಲಯದಲ್ಲಿ ಅರ್ಚಕನಾಗಿದ್ದು, ಯುಗಾದಿಯಂದು ಜನರನ್ನು ಸೆಳೆಯಲು ನಾಗರಹಾವು ಹಾವು ಹಾಗೂ ನಾಗಮಣಿ(ಬಲ್ಬ್) ತಂದು ದೇವರ ವಿಗ್ರಹದ ಮುಂದೆ ಇಟ್ಟಿದ್ದಾನೆ.

ಕಟ್ಟುಕತೆ ಕಟ್ಟಿ ಜನರಿಗೆ ನಂಬಿಸಿದ್ದಾನೆ. ಈತನ ನಕಲಿ ನಾಗಮಣಿ ವಿಚಾರ ಗೊತ್ತಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿದಾಗ, ನಿಜ ಸಂಗತಿ ಬೆಳಕಿಗೆ ಬಂದಿದೆ.

ಪ್ರಶಾಂತ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...