alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆಬೆತ್ತಲೆಯಾಗಿದ್ದ ಆರೋಪಿಗಳಿಂದ ಠಾಣೆಯಲ್ಲೇ ನಾಗಿನ್ ಡ್ಯಾನ್ಸ್

representational image

ಗೌರಿಬಿದನೂರು: ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದ ಪೊಲೀಸರು ಮ್ಯೂಸಿಕ್ ಹಾಕಿ ಅರೆಬೆತ್ತಲೆಯಾಗಿದ್ದ ಆರೋಪಿಗಳಿಂದ ನಾಗಿನ್ ಡ್ಯಾನ್ಸ್ ಮಾಡಿಸಿರುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ.

ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ರ ‘ಗಬ್ಬರ್ ಸಿಂಗ್’ ಚಿತ್ರದಲ್ಲಿ ಆರೋಪಿಗಳಿಂದ ಹಿಂದಿ ಚಿತ್ರಗಳಿಗೆ ಠಾಣೆಯಲ್ಲೇ ಡ್ಯಾನ್ಸ್ ಮಾಡಿಸಿದ್ದ ಮಾದರಿಯಲ್ಲೇ ಗೌರಿಬಿದನೂರಿನ ಸರ್ಕಲ್ ಇನ್ಸ್ ಪೆಕ್ಟರ್ ಅವರ ಕಛೇರಿಯಲ್ಲಿ ಈ ಘಟನೆ 6 ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂಚೇನಹಳ್ಳಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುಂದರ್ ಹಾಗೂ ಇತರೆ ಸಿಬ್ಬಂದಿ ಮುಂದೆ ಈ ಘಟನೆ ನಡೆದಿದೆ. ದರೋಡೆ ಪ್ರಕರಣದ ಆರೋಪಿಗಳಾಗಿದ್ದ ಚಿಗಟಗೇರಿ ಪ್ರವೀಣ್ ಗ್ಯಾಂಗ್ ಸದಸ್ಯರಿಂದ ಅಂಡರ್ ವೇರ್ ನಲ್ಲಿ ಡ್ಯಾನ್ಸ್ ಮಾಡಿಸುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಈಗ ಬಹಿರಂಗಪಡಿಸಿದ್ದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...