alex Certify
ಕನ್ನಡ ದುನಿಯಾ       Mobile App
       

Kannada Duniya

ಡಾ. ರಾಜ್ ಮೊಮ್ಮಗನಿಗೂ ಹ್ಯಾರಿಸ್ ಪುತ್ರನಿಂದ ಆವಾಜ್?

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಮೊಮ್ಮಗನಿಗೂ ಶಾಸಕ ಎನ್. ಎ. ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ.

ಯುಬಿ ಸಿಟಿಯಲ್ಲಿ ಮತ್ತು ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದ ನಲಪಾಡ್ ಹ್ಯಾರಿಸ್ ಮತ್ತು ಆತನ ಬೆಂಬಲಿಗರು ಆಸ್ಪತ್ರೆಯಲ್ಲಿ ಅಣ್ಣಾವ್ರ ಮೊಮ್ಮಗನಿಗೆ ಬೆದರಿಸಿದ್ದಾರೆ.

ಹಲ್ಲೆಗೊಳಗಾದ ವಿದ್ವತ್ ನನ್ನು ಮಾತನಾಡಿಸಲು ಬಂದಿದ್ದ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಗುರುಗೆ ನಲಪಾಡ್ ಹ್ಯಾರಿಸ್ ಮತ್ತು ಸಹಚರರು ಬೆದರಿಸಿದ್ದಾರೆ. ದಬ್ಬಾಳಿಕೆಯಿಂದ ತಳ್ಳಾಟ, ನೂಕಾಟ ನಡೆಸಿದ್ದಾರೆ.

ಗುರು ಮತ್ತು ವಿದ್ವತ್ ಸ್ನೇಹಿತರಾಗಿದ್ದು, ಆಸ್ಪತ್ರೆಯಲ್ಲಿದ್ದ ಸ್ನೇಹಿತನನ್ನು ನೋಡಲು ಹೋದಾಗ, ನಲಪಾಡ್ ಹ್ಯಾರಿಸ್ ಬೆದರಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...