alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಾಗಿದೆ ನೋಡಿ ಮೈಸೂರು ಅರಮನೆಯ ದರ್ಬಾರ್ ಹಾಲ್ !

mys-palaceಮೈಸೂರು ದಸರಾ ವಿಶ್ವದಲ್ಲೇ ಜನಪ್ರಿಯ. ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಕೂಡ ಮೈಸೂರಿಗಿದೆ.

ಆದ್ರೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶೇರ್ ಮಾಡಿರುವ ಈ ಫೋಟೋ ನೋಡಿದ್ರೆ ನಗರದ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗಲು ಸಾರ್ವಜನಿಕರಿಗೆ ಮನಸ್ಸಿಲ್ಲವೇನೋ ಎನಿಸುತ್ತದೆ.

ದಸರಾ ಆಚರಣೆಯ ಬಳಿಕ ಮೈಸೂರು ಅರಮನೆಯ ದರ್ಬಾರ್ ಹಾಲ್ ನ ಸ್ಥಿತಿಯನ್ನು ಬಿಂಬಿಸುವ ಫೋಟೋವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಲಾಗಿದೆ. ಅರಮನೆ ಆವರಣದ ತುಂಬೆಲ್ಲ ಪ್ಲಾಸ್ಟಿಕ್ ಬಾಟಲ್ ಗಳು, ಕಾಗದದ ಪ್ಲೇಟ್ ಗಳು, ಲೋಟಗಳೇ ತುಂಬಿಕೊಂಡಿವೆ.

ಇದೇ ರೀತಿ ಮಾಡಿದ್ರೆ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯನ್ನು ನಾವು ಉಳಿಸಿಕೊಂಡು ಹೋಗಲು ಸಾಧ್ಯವಿಲ್ಲ, ಅರಮನೆಯ ದರ್ಬಾರ್ ಹಾಲ್ ಸಿನಿಮಾ ಥಿಯೇಟರ್ ಅಲ್ಲ ಅನ್ನೋದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅಲ್ಲೇ ತಿಂದು ಅಲ್ಲೇ ತಟ್ಟೆ, ಲೋಟ ಎಸೆಯುವುದು ಸರಿಯಲ್ಲ. ಸಾಂಸ್ಕೃತಿಕ ನಗರಿ, ನಮ್ಮ ಹಬ್ಬದ ಗೌರವವನ್ನು ಉಳಿಸಿಕೊಳ್ಳಬೇಕು ಅಂತಾ ಯದುವೀರ್ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ಮತ್ತೊಂದೆಡೆ ಸ್ವಚ್ಛತೆ ಬಗ್ಗೆ ಗಮನಹರಿಸುತ್ತೇವೆ ಅಂತಾ ಅಧಿಕಾರಿಗಳು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...