alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಷಿಗಳ ಸಾವು: 1 ತಿಂಗಳು ಮೃಗಾಲಯ ಬಂದ್

mys

ಮೈಸೂರು: ಮೈಸೂರು ಚಾಮರಾಜೇಂದ್ರ ಮೃಗಾಲಯದ ಪಕ್ಷಿಗಳಲ್ಲಿ ಮಾರಕ ರೋಗದ ವೈರಾಣು ಪತ್ತೆಯಾಗಿದ್ದು, ಹಲವಾರು ಪಕ್ಷಿಗಳು ಸಾವನ್ನಪ್ಪಿವೆ.

ಮುಂಜಾಗ್ರತಾ ಕ್ರಮವಾಗಿ ಜನವರಿ 4 ರಿಂದ ಫೆಬ್ರವರಿ 2 ರ ವರೆಗೆ ಮೈಸೂರು ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಮಾರಕ ಹೆಚ್ 5 ಎನ್ 8 ರೋಗಾಣು ಪತ್ತೆಯಾಗಿದ್ದು, ಮೃಗಾಲಯದ ಆವರಣದಲ್ಲಿ ವೈರಾಣು ಹರಡದಂತೆ ಔಷಧಿ ಸಿಂಪಡಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ 1 ತಿಂಗಳ ಕಾಲ ಮೃಗಾಲಯ ಬಂದ್ ಮಾಡುವುದಾಗಿ ನಿರ್ದೇಶಕಿ ಕಮಲಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...