alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಸೂರಿನಲ್ಲಿ ಕುದಿಯುವ ಭೂಮಿಗೆ ಬಾಲಕ ಬಲಿ

mysu-bumi

ಮೈಸೂರು: ಮೈಸೂರು ಹೊರವಲಯದಲ್ಲಿ ವಿಚಿತ್ರ ಘಟನೆ ನಡೆದಿದೆ. ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಫ್ತಿಯ ಬೆಲವತ್ತಿ ಗ್ರಾಮದ ಬಳಿ ಭೂಮಿ ಕುದಿಯುತ್ತಿದೆ.

14 ವರ್ಷದ ಬಾಲಕ ಹರ್ಷಿಲ್ ಹಾಗೂ ಆತನ ಸ್ನೇಹಿತರು ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಕುದಿಯುತ್ತಿದ್ದ ಭೂಮಿಯ ಉಸುಕಿನಲ್ಲಿ ಸಿಲುಕಿದ್ದಾರೆ.

ಹರ್ಷಿಲ್ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಾರ್ಖಾನೆಗಳ ರಾಸಾಯನಿಕವನ್ನು ಈ ಸ್ಥಳದಲ್ಲಿ ಸುರಿಯಲಾಗಿದ್ದು, ಅನೇಕ ಪ್ರಾಣಿಗಳು ಹಿಂದೆ ಸಾವು ಕಂಡಿದ್ದವು.

ಮಧ್ಯಾಹ್ನದಿಂದ ರಾಸಾಯನಿಕ ಸುರಿದ ಸ್ಥಳದಲ್ಲಿ ಭೂಮಿ ಕುದಿಯುತ್ತಿದ್ದು, ಅಲ್ಲಲ್ಲಿ ಬೆಂಕಿಯೂ ಕಾಣಿಸಿಕೊಳ್ಳುತ್ತಿದೆ.

ಇದನ್ನು ಅರಿಯದ ಹರ್ಷಿಲ್ ಮತ್ತು ಸ್ನೇಹಿತರು ಅಲ್ಲಿಗೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಜ್ವಾಲಾಮುಖಿಯಂತೆ ಭೂಮಿ ಕುದಿಯುತ್ತಿದ್ದು, ಸುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...