alex Certify
ಕನ್ನಡ ದುನಿಯಾ       Mobile App
       

Kannada Duniya

ಇವ್ರು ಕತ್ತೆಗೆ ಮದ್ವೆ ಮಾಡಿಸಿದ್ದರ ಹಿಂದಿದೆ ಒಂದು ಸ್ವಾರಸ್ಯಕರ ಕಥೆ

ಕಪ್ಪೆ ಮದುವೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಕಡೆ ಕತ್ತೆಗೂ ಮದುವೆ ಮಾಡಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡಿನ ಹುರಾ ಎಂಬಲ್ಲಿ ಗುರುವಾರ ಈ ಗಾರ್ದಭ ಕಲ್ಯಾಣ ನಡೆದಿದೆ.

ಚಾಮರಾಜನಗರ ಜಿಲ್ಲೆಯ ದಾಸೂರಿನಿಂದ ಹೆಣ್ಣು ಕತ್ತೆಯೊಂದನ್ನು ತಂದ ಗ್ರಾಮಸ್ಥರು, ಈ ಕತ್ತೆಗಳಿಗೆ ಬಟ್ಟೆ ಹೊದೆಸಿ ಸಿಂಗಾರ ಮಾಡಿ ಅರ್ಚಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿಯೇ ಮಂಗಳಸೂತ್ರ ಕಟ್ಟಿ ಮದುವೆ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಅಷ್ಟಕ್ಕೂ ಈ ಊರಿನ ಜನ ಕತ್ತೆಗೆ ಮದುವೆ ಮಾಡಿಸಿದ್ದೇಕೆ ಎಂಬುದರ ಹಿಂದೆ ಒಂದು ಸ್ವಾರಸ್ಯಕರ ಕಾರಣವಿದೆ. ಈ ಗಂಡು ಕತ್ತೆ ತನ್ನ ಜೋಡಿಯಾದ ಹೆಣ್ಣು ಕತ್ತೆಯೊಂದಿಗೆ ಆರಾಮವಾಗಿಯೇ ಇತ್ತಂತೆ. ಅದರೆ ಜುಲೈ ತಿಂಗಳಲ್ಲಿ ಚಿರತೆಯೊಂದು ದಾಳಿ ಮಾಡಿ ಹೆಣ್ಣು ಕತ್ತೆಯನ್ನು ಸಾಯಿಸಿತ್ತು. ಆ ಬಳಿಕ ಒಂಟಿತನಕ್ಕೆ ಈಡಾದ ಗಂಡು ಕತ್ತೆ ಒರಟಾಗಿ ವರ್ತಿಸುತ್ತಿದ್ದುದಲ್ಲದೇ ಊರಿನ ಜನರ ಮೇಲೆ ದಾಳಿ ಮಾಡಿ ಕಾಟ ಕೊಡುತ್ತಿತ್ತು. ಬಹುಶಃ ಜೋಡಿಯಾಗಿದ್ದ ಹೆಣ್ಣು ಕತ್ತೆಯನ್ನು ಕಳೆದುಕೊಂಡಿದ್ದಕ್ಕೆ ಇದು ಹೀಗೆ ವರ್ತಿಸುತ್ತಿದೆ ಎಂದುಕೊಂಡು ಮದುವೆ ಮಾಡಿಸಿದ್ದೇವೆ ಎಂದಿದ್ದಾರೆ ಗ್ರಾಮಸ್ಥರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...