alex Certify
ಕನ್ನಡ ದುನಿಯಾ       Mobile App
       

Kannada Duniya

ಜಂಗಲ್ ರೆಸಾರ್ಟ್ ಗೆ ಎಂಟ್ರಿ ಕೊಟ್ಟ ಹುಲಿ

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲ್ಲೂಕಿನ ಕಾರಾಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಲ್ಲಿ ಹುಲಿ ಕಾಣಿಸಿಕೊಂಡಿದೆ.

ರೆಸಾರ್ಟ್ ಆವರಣದಲ್ಲಿ ಹುಲಿಯನ್ನು ಕಂಡ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದು, ರೆಸಾರ್ಟ್ ಸಿಬ್ಬಂದಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸ್ಥಳದಲ್ಲಿ ಪ್ರವಾಸಿಗರು ಮತ್ತು ಜನ ಆಗಾಗ ಬರುವುದರಿಂದ ಸದ್ಯಕ್ಕೆ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಆನೆಯ ಮೂಲಕ ಹುಲಿ ಇರುವ ಸ್ಥಳವನ್ನು ಗಮನಿಸಿ ಅದನ್ನು ವಾಪಸ್ ಕಾಡಿಗೆ ಓಡಿಸಲು ಯೋಜಿಸಲಾಗಿದೆ.

ರೆಸಾರ್ಟ್ ಆವರಣದಲ್ಲೇ ಹುಲಿ ಅವಿತುಕೊಂಡಿರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ನಿಗಾ ವಹಿಸಿದ್ದಾರೆ.

ಕಳೆದ ವಾರ ಮೈಸೂರು ಮೃಗಾಲಯಕ್ಕೆ ಕಾಡಿನಿಂದ ಬಂದಿದ್ದ ಚಿರತೆಯೊಂದು ಪ್ರವೇಶಿಸಿ ಆತಂಕ ಮೂಡಿಸಿತ್ತು. ಸತತ ಕಾರ್ಯಾಚರಣೆ ನಡೆಸಿ ಅದನ್ನು ಸೆರೆ ಹಿಡಿಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...