alex Certify
ಕನ್ನಡ ದುನಿಯಾ       Mobile App
       

Kannada Duniya

ಭಿಕ್ಷೆಯಿಂದ ಗಳಿಸಿದ 2 ಲಕ್ಷ ರೂ. ದೇವಾಲಯಕ್ಕೆ ದೇಣಿಗೆ

ಮೈಸೂರು: ದೇವಾಲಯದ ಎದುರು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ತಾವು ಗಳಿಸಿದ ಹಣದಲ್ಲಿ 2 ಲಕ್ಷ ರೂ.ಗಳನ್ನು ದೇವಾಲಯದ ಜೀರ್ಣೋದ್ಧಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ಮೈಸೂರು ಯಾದವಗಿರಿಯ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದ ಎದುರು ಸುಮಾರು 20 ವರ್ಷಗಳಿಂದ ಎಂ.ವಿ. ಸೀತಾ ಅವರು ಭಿಕ್ಷೆ ಬೇಡುತ್ತಿದ್ದಾರೆ. ಇದರಲ್ಲಿ ಸಂಪಾದಿಸಿದ 2 ಲಕ್ಷ ರೂ.ಗಳನ್ನು ದೇವಾಲಯದ ಜೀರ್ಣೊದ್ಧಾರ ಕಾರ್ಯಕ್ಕೆ ನೀಡಿದ್ದಾರೆ.

ಶ್ರೀಮಂತರ ಕುಟುಂಬದಲ್ಲಿ ಜನಿಸಿದ್ದ ಸೀತಾ ಅವರು ನಂತರದಲ್ಲಿ ಕಾರಣಾಂತರದಿಂದ ಭಿಕ್ಷೆ ಬೇಡುವಂತಾಗಿದೆ. ದೇವಾಲಯದ ಎದುರು ಗಳಿಸಿದ್ದನ್ನು ದೇವರಿಗೇ ಅರ್ಪಿಸಲು ಅವರು ಮುಂದಾಗಿದ್ದು, ಆಡಳಿತ ಮಂಡಳಿಯವರು ಅವರಿಂದ ಹಣ ಪಡೆಯಲು ನಿರಾಕರಿಸಿದ್ದಾರೆ. ಹಣವನ್ನು ಬ್ಯಾಂಕ್ ನಲ್ಲಿ ಖಾತೆ ತೆರೆದು ಇಡುವಂತೆ ಸಲಹೆ ನೀಡಿದ್ದಾರೆ. ಆದರೆ, ಇದನ್ನು ಒಪ್ಪದ ಸೀತಾ ಅವರು ಹಣವನ್ನು ಪಡೆಯುವಂತೆ ಆಡಳಿತ ಮಂಡಳಿಯವರಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...