alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಯನ್ನು ಮದುವೆಯಾದವ ದುಡುಕಿದ

ಮೈಸೂರು: ವಿರೋಧದ ನಡುವೆಯೂ ದೊಡ್ಡಮ್ಮನ ಮಗಳನ್ನು ಮದುವೆಯಾಗಿದ್ದ ಯುವಕ, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಚನಹಳ್ಳಿಯಲ್ಲಿ ನಡೆದಿದೆ.

ಸುತ್ತೂರು ನಿವಾಸಿಯಾಗಿರುವ 23 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವ. ಸಂಬಂಧದಲ್ಲಿ ಸಹೋದರಿಯಾಗಬೇಕಿದ್ದ ತನ್ನ ತಾಯಿಯ ಅಕ್ಕನ ಮಗಳನ್ನು 3 ತಿಂಗಳ ಹಿಂದೆ ಯುವಕ ಮದುವೆಯಾಗಿದ್ದ.

ಇಬ್ಬರೂ ಪ್ರೀತಿಸಿದ್ದು, ಮನೆಯವರ ತೀವ್ರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ. ಇಬ್ಬರ ನಡುವೆ ಬಿರುಕು ಮೂಡಿದ್ದು, ಯುವತಿಯ ಊರಿಗೆ ಬಂದ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...