alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ತಿರುವು ಪಡೆದ ದೇವಿ ಸೀರೆ ವಿಚಾರ

ಮೈಸೂರು: ವೈಭವದ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಮೇಲೆ, ದೇವಿ ಚಾಮುಂಡೇಶ್ವರಿ ನೀಲಿ ವರ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಈ ಸೀರೆಯ ವಿಚಾರವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಅಂದು ದೇವಿಗೆ 2 ಸೀರೆಗಳನ್ನು ಉಡಿಸಲಾಗಿದೆ. ಮೇಯರ್ ಕೊಟ್ಟಿದ್ದ ಸೀರೆಯ ಮೇಲೆ, ಸಿ.ಎಂ. ಪತ್ನಿ ಹರಕೆಯಾಗಿ ಕೊಟ್ಟಿದ್ದ ಸೀರೆಯನ್ನು ಉಡಿಸಲಾಗಿದೆ. ಅಧಿಕಾರ ದುರುಪಯೋಗದ ಆರೋಪವೂ ಕೇಳಿ ಬಂದಿದೆ.

ಬೆಂಗಳೂರಿನ ಉದ್ಯಮಿಯೊಬ್ಬರು ಅನೇಕ ವರ್ಷಗಳಿಂದ ದೇವಿಗೆ ಸೀರೆ ಹರಕೆಯಾಗಿ ಕೊಡುತ್ತಿದ್ದರು. ಈ ಬಾರಿ ಅವರ ಮನವೊಲಿಸಿ ಮೇಯರ್ ರವಿಕುಮಾರ್ ನಾಡಿನ ಜನರ ಒಳಿತಿಗೆ ಪ್ರಾರ್ಥಿಸಿ ನೇರಳೆ ಬಣ್ಣದ ಸೀರೆ ಕೊಟ್ಟಿದ್ದು, ಅದನ್ನೇ ದೇವಿಗೆ ಉಡಿಸಲಾಗಿತ್ತು.

ಆದರೆ, ಮೆರವಣಿಗೆಯ ವೇಳೆ ನೇರಳೆ ಬಣ್ಣದ ಸೀರೆಯ ಮೇಲೆ, ನೀಲ ವರ್ಣದ ಸೀರೆ ಉಡಿಸಲಾಗಿತ್ತು. ಇದು ಮೇಯರ್ ಅಸಮಾಧಾನಕ್ಕೆ ಕಾರಣವಾಗಿದೆ.

ನೇರಳೆ ಬಣ್ಣದ ಸೀರೆ ಮೇಲೆ ನೀಲವರ್ಣದಸೀರೆ ತೊಡಿಸಲಾಗಿದೆ ಎಂದು ಮೇಯರ್ ಹೇಳಿದ್ದು, ಮುಂದಿನ ದಿನಗಳಲ್ಲಿ ಮೈಸೂರು ಮೇಯರ್ ಕೊಟ್ಟ ಸೀರೆಯನ್ನು ತೊಡಿಸಬೇಕೆಂದು ನಿಯಮ ತರಬೇಕಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...