alex Certify ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ: ಬೆತ್ತಲೆ ಫೋಟೋ ಪಡೆದು ಬ್ಲಾಕ್ ಮೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ: ಬೆತ್ತಲೆ ಫೋಟೋ ಪಡೆದು ಬ್ಲಾಕ್ ಮೇಲ್

ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಅಮಾಯಕ ಯುವಕರನ್ನು ಬಲೆಗೆ ಬೀಳಿಸಿ ಹಣ ಪೀಕುತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಮಹಿಳೆ ಮೈಸೂರು ವಿಜಯನಗರದ ಎರಡನೇ ಹಂತದ ವಾಟರ್ ಟ್ಯಾಂಕ್ ಬಳಿ ಮಸಾಜ್ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು.

ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆಯ ಮತ್ತೊಂದು ಮುಖ ಬಯಲಾಗಿದೆ. ಯುವಕರನ್ನು ಬಲೆಗೆ ಬೀಳಿಸಿಕೊಂಡು ವಾಟ್ಸಾಪ್ ಚಾಟ್ ಮೂಲಕ ಬೆತ್ತಲೆ ಫೋಟೋಗಳನ್ನು ಕಳುಹಿಸುತ್ತಿದ್ದ ಮಹಿಳೆ, ನಂತರ ಯುವಕರು ಬೆತ್ತಲೆ ಫೋಟೋ ಕಳುಹಿಸಿದಾಗ ಅವನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹಣ ಪೀಕುತಿದ್ದಳು ಎನ್ನುವುದು ಗೊತ್ತಾಗಿದೆ.

ಅಲ್ಲದೇ, ಪರಿಚಯಸ್ಥ ದಂಪತಿಯಿಂದ ಲಕ್ಷಾಂತರ ರೂ. ಹಣ ಪಡೆದು ಹಣ ವಾಪಸ್ ಕೇಳಿದಾಗ ಹಲ್ಲೆ ಮಾಡಿ ಬೆದರಿಸಿದ್ದಳು ಎಂದು ಹೇಳಲಾಗಿದೆ. ಮಹಿಳೆ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...