alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಯುವ ಜೋಡಿಯ ಮತ್ತೊಂದು ವಿಡಿಯೋ

Wedding-palace-456ಫೋಟೋ ತೆಗೆಯುವುದು ಹಾಗೂ ಚಿತ್ರೀಕರಣ ಮಾಡುವುದು ನಿಷೇಧವಿರುವ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಯುವ ಜೋಡಿಯೊಂದು ವಿಡಿಯೋ ಶೂಟ್ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದು ವಿವಾದ ಉಂಟಾಗಿರುವ ಬೆನ್ನಲ್ಲೇ ಈಗ ಈ ಜೋಡಿಯ ಮತ್ತೊಂದು ವಿಡಿಯೋ ಬಹಿರಂಗವಾಗಿದೆ.

ಪ್ರವಾಸಿಗರು ತಮ್ಮ ಮೊಬೈಲ್ ತೆಗೆದುಕೊಂಡು ಹೋಗಲೂ ನಿಷೇಧವಿರುದ ಅರಮನೆಯಲ್ಲಿ ಈ ಜೋಡಿಯ ವಿಡಿಯೋ ಚಿತ್ರೀಕರಣವನ್ನು ಗಂಟೆಗಟ್ಟಲೇ ಮಾಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಅರಮನೆಯ ದರ್ಬಾರ್ ಹಾಲ್, ಖಾಸಗಿ ದರ್ಬಾರ್ ಹಾಗೂ ಹೊರ ಆವರಣಗಳಲ್ಲಿ ಈ ಜೋಡಿಯ ವಿಡಿಯೋ ಶೂಟಿಂಗ್ ಮಾಡಲಾಗಿದ್ದು, ಹೈದರಾಬಾದಿನ ವೆಂಕಿ ಎಂಬವರು ವಿಡಿಯೋ ಮಾಡಿದ್ದಾರೆಂದು ಹೇಳಲಾಗಿದೆ.

ಅರಮನೆಯ ಭದ್ರತಾ ಹೊಣೆ ಹೊತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾರ ಒತ್ತಡಕ್ಕೆ ಮಣಿದು ಈ ಜೋಡಿಯ ವಿಡಿಯೋ ಮಾಡಲು ಅವಕಾಶ ನೀಡಿದೆ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಈಗ ತನಿಖೆ ಚುರುಕುಗೊಳಿಸಲಾಗಿದ್ದು, ವಿಡಿಯೋಗ್ರಾಫರ್ ವೆಂಕಿ ಹಾಗೂ ಯುವ ಜೋಡಿಗೆ ನೋಟೀಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ವರನಟ ಡಾ. ರಾಜ್ ಕುಮಾರ್ ಅಭಿನಯದ ‘ಮಯೂರ’ ಸಿನಿಮಾ ನಂತರ, ಯಾವ ಸಿನಿಮಾಕ್ಕೂ ಮೈಸೂರು ಅರಮನೆಯಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೇಳಿದಾಗಲೂ ನಿರಾಕರಿಸಲಾಗಿತ್ತೆನ್ನಲಾಗಿದ್ದು, ಈ ಯುವ ಜೋಡಿ ಮಾತ್ರ ಗಂಟೆಗಟ್ಟಲೆ ವಿಡಿಯೋ ಶೂಟಿಂಗ್ ಮಾಡಿಸಿಕೊಂಡಿರುವುದು ಯಕ್ಷ ಪ್ರಶ್ನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...