alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧವಿದ್ದ ಸ್ಥಳದಲ್ಲಿ ಯಡವಟ್ಟು ಮಾಡಿದ ಜೋಡಿ

Wedding palace

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆಗೆ ಅಪಾರ ಸಂಖ್ಯೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅರಮನೆಯೊಳಗೆ ಯಾವುದೇ ಕಾರಣಕ್ಕೂ ಫೋಟೋ, ಚಿತ್ರೀಕರಣ ಮಾಡುವಂತಿಲ್ಲ. ಹೀಗಿದ್ದರೂ, ಅಚಾತುರ್ಯ ನಡೆದಿದೆ.

ಮೈಸೂರು ಅರಮನೆಯಲ್ಲಿ ಆದಿತ್ಯ ಮತ್ತು ನವ್ಯತಾ ಎಂಬ ಜೋಡಿಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಇವರಿಗೆ ಶೂಟಿಂಗ್ ಮಾಡಲು ಅನುಮತಿ ಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಎದುರಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಬಹು ಚರ್ಚೆಯ ವಿಷಯವಾಗಿದೆ. ಅರಮನೆಯ ದರ್ಬಾರ್ ಹಾಲ್, ಖಾಸಗಿ ಹಾಲ್ ನಲ್ಲಿ ಹೆಲಿಕ್ಯಾಂ ಬಳಸಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿದ್ದು, ಅವರಿಗೆ ಅನುಮತಿ ಕೊಟ್ಟಿದ್ದು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ವರನಟ ಡಾ. ರಾಜ್ ಕುಮಾರ್ ಅಭಿನಯದ ‘ಮಯೂರ’ ಸಿನಿಮಾ ನಂತರ, ಯಾವ ಸಿನಿಮಾಕ್ಕೂ ಇಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೇಳಿದಾಗಲೂ ನಿರಾಕರಿಸಲಾಗಿದೆ.

ಈ ಸ್ಥಳದಲ್ಲಿ ಫೋಟೋ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದ್ದರೂ, ಜೋಡಿಯೊಂದರ ವಿಡಿಯೋ ಚಿತ್ರೀಕರಣ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲಿ ನಾನೇ ಫೋಟೋ ತೆಗೆಸಿಕೊಂಡಿಲ್ಲ. ಈ ಬಗ್ಗೆ ವಿಚಾರಿಸುವುದಾಗಿ ರಾಜಮಾತೆ ಪ್ರಮೋದಾದೇವಿ ತಿಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...