alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಆಸೆ ಪೂರೈಸಲು ಸ್ಕೂಟರ್ ನಲ್ಲೇ ತೀರ್ಥಯಾತ್ರೆಗೆ ಕರೆದೊಯ್ದ ಮಗ

ಧಾರವಾಡ: ಇತ್ತೀಚೆಗಷ್ಟೇ ತಂದೆ ತಾಯಿಗಳ ಆಸೆ ಪೂರೈಸಲು ಹೆಗಲಮೇಲೆ ಹೊತ್ತು ಹರಿದ್ವಾರಕ್ಕೆ ಹೋದ ಸಹೋದರರ ಬಗ್ಗೆ ನೋಡಿದ್ದೆವು. ಈಗ ಮತ್ತೊಬ್ಬ ಆಧುನಿಕ ಶ್ರವಣಕುಮಾರ, ತಾಯಿಯ ಆಸೆ ಪೂರೈಸಲು ಸ್ಕೂಟರ್ ಮೂಲಕವೇ ತೀರ್ಥ ಯಾತ್ರೆ ಆರಂಭಿಸಿದ್ದಾರೆ.

ಮೈಸೂರು ಮೂಲದ ಡಿ. ಕೃಷ್ಣಕುಮಾರ್, ತಮ್ಮ ತಾಯಿ ಚೂಡರತ್ನ ಅವರ ಆಸೆಯಂತೆ ತೀರ್ಥಯಾತ್ರೆ ಮಾಡುತ್ತಿದ್ದು, ದಕ್ಷಿಣ ಭಾರತದ 6 ರಾಜ್ಯಗಳ ಪ್ರವಾಸ ಈಗಾಗಲೇ ಮುಗಿಸಿದ್ದಾರೆ. ಕೃಷ್ಣಕುಮಾರ್ ತಮ್ಮ ತಂದೆ ಬಳಸಿದ್ದ 20 ವರ್ಷ ಹಳೆಯದಾದ ಬಜಾಜ್ ಚೇತಕ್ ಸ್ಕೂಟರ್ ನಲ್ಲೇ ತೀರ್ಥಯಾತ್ರೆ ಮಾಡುತ್ತಿದ್ದು, ತಂದೆ ಇದ್ದಾಗ ಈ ಪ್ರವಾಸ ಮಾಡಲು ಆಗಲಿಲ್ಲ, ಆದರೆ ತಂದೆ ನಿಧನ ಬಳಿಕ ತಾಯಿಯ ಇಚ್ಛೆಯಂತೆ ಯಾತ್ರೆ ಆರಂಭ ಮಾಡಿದ್ದೇನೆ ಎಂದು ಹೇಳುತ್ತಾರೆ.

ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರುವ ಇವರ ತೀರ್ಥ ಯಾತ್ರೆ ಜನವರಿ 16 ರಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...