alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಗೆ ಬೆಂಕಿಯಿಟ್ಟು ತಾನೂ ಸಾವಿಗೆ ಶರಣಾದ ತಾಯಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ತಾಯಿಯೋರ್ವಳು ಮಗುವಿಗೂ ಬೆಂಕಿಯಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ಮಹದೇವಪುರದಲ್ಲಿ ನಡೆದಿದೆ.

ಕೆ.ಆರ್. ಪೇಟೆ ಮೂಲದ ಗೌರಮ್ಮ (24) ನಿಯಾಲ್ (2) ಮೃತ ದುರ್ದೈವಿಗಳು. ಮಾಲೂರಿನಲ್ಲಿ ಶಿಕ್ಷಕರಾಗಿರುವ ಮೈಸೂರು ಮೂಲದ ಲೋಹಿತ್ ಎಂಬುವವರನ್ನು ಮೂರು ವರ್ಷದ ಹಿಂದೆ ಗೌರಮ್ಮ ವಿವಾಹವಾಗಿದ್ದರು.

ಮದುವೆಯಾದಾಗಿನಿಂದಲು ಪತಿ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಇದೇ ಕಾರಣಕ್ಕಾಗಿ ನಿನ್ನೆಯೂ ಕೂಡ ಮನೆಯಲ್ಲಿ ಜಗಳವಾಗಿದೆ. ಪತಿ ಕಿರುಕುಳ ತಾಳಲಾರದೆ ಬೇಸತ್ತ ಗೌರಮ್ಮ ನಿನ್ನೆ ರಾತ್ರಿ ಮಗನನ್ನು ಕರೆದುಕೊಂಡು ತನ್ನ ಕೋಣೆಯನ್ನು ಸೇರಿಕೊಂಡು ಮಗನಿಗೂ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...