alex Certify
ಕನ್ನಡ ದುನಿಯಾ       Mobile App
       

Kannada Duniya

ಯುವ ಜೋಡಿಯ ಮದುವೆ ಮಾಡಿದ ಗ್ರಾಮಸ್ಥರು

ಮೈಸೂರು: ಮದುವೆಯಾಗುವುದಾಗಿ ಯುವತಿಯನ್ನು ಪ್ರೀತಿಸಿ, ನಂತರ ಆಕೆಗೆ ಕೈಕೊಡಲು ಮುಂದಾಗಿದ್ದ ಯುವಕನಿಗೆ ಗ್ರಾಮಸ್ಥರೇ ಬುದ್ಧಿವಾದ ಹೇಳಿ ಮದುವೆ ಮಾಡಿದ್ದಾರೆ.

ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲು ಗ್ರಾಮದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಅದೇ ಗ್ರಾಮದ ಯುವತಿ ಪ್ರೀತಿಸಿದ್ದಾರೆ.

5 ವರ್ಷಗಳಿಂದ ಇವರು ಪ್ರೀತಿಸುತ್ತಿರುವ ವಿಷಯ ಗ್ರಾಮಸ್ಥರಿಗೂ ತಿಳಿದಿದೆ. ಇತ್ತೀಚೆಗೆ ಯುವತಿಯಿಂದ ದೂರವಾದ ಯುವಕ, ಬೇರೆ ಮದುವೆಯಾಗಲು ಮುಂದಾಗಿದ್ದಾನೆ.

ಯುವತಿಗೆ ಹಣ ಕೊಟ್ಟು ಬೇರೆ ಮದುವೆಯಾಗುವಂತೆ ಬಲವಂತ ಮಾಡಿದ್ದಾನೆ. ಈ ವಿಚಾರ ತಿಳಿದ ಗ್ರಾಮಸ್ಥರು ಆತನನ್ನು ಪ್ರಶ್ನಿಸಲು ಮುಂದಾಗುತ್ತಿದ್ದಂತೆ ಪರಾರಿಯಾಗಲೆತ್ನಿಸಿದ್ದಾನೆ. ಕೊನೆಗೆ ಗ್ರಾಮಸ್ಥರು ಆತನನ್ನು ಕರೆದುಕೊಂಡು ಬಂದು ಗ್ರಾಮದ ದೇವಾಲಯದಲ್ಲಿ ಮದುವೆ ಮಾಡಿಸಿದ್ದಾರೆ. ಮೊದಲಿಗೆ ಮದುವೆಯಾಗಲು ನಿರಾಕರಿಸಿದ ಯುವಕ ಗ್ರಾಮಸ್ಥರ ಬುದ್ಧಿಮಾತಿನಿಂದ ಮದುವೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...