alex Certify
ಕನ್ನಡ ದುನಿಯಾ       Mobile App
       

Kannada Duniya

ಜಮೀನಿನಲ್ಲೇ ಎಳೆದಾಡಿ ಮಹಿಳೆ ಮೇಲೆ….

Crime-against-Women

ಮೈಸೂರು: ಜಮೀನು ವಿವಾದದ ಹಿನ್ನಲೆಯಲ್ಲಿ ಮಹಿಳೆಯೊಬ್ಬರ ಮೇಲೆ, ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಚಪ್ಪರದ ಹಳ್ಳಿಯಲ್ಲಿ ನಡೆದಿದೆ. ಮಹಿಳೆಯ ಪತಿಯಿಂದ ಜಮೀನು ಖರೀದಿಸಿದವರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಈಕೆಯನ್ನು ಚಪ್ಪರದಹಳ್ಳಿಯ ಯುವಕನೊಂದಿಗೆ ಮದುವೆ ಮಾಡಲಾಗಿದ್ದು, ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ, ಅದೇ ಊರಿನಲ್ಲಿ ಇಬ್ಬರು ಮಕ್ಕಳೊಂದಿಗೆ ಬೇರೆಯಾಗಿ ವಾಸವಾಗಿದ್ದಾರೆ. ಬೇರೆಯಾಗಿದ್ದ ಈಕೆಯ ಪತಿ ಜಮೀನನ್ನು ಮಾರಾಟ ಮಾಡಿದ್ದು, ಅದನ್ನು ಖರೀದಿಸಿದವರು ಉಳುಮೆ ಮಾಡಲು ಹೋಗಿದ್ದಾರೆ. ಆಗ ಮಹಿಳೆ ಈ ಜಮೀನಿನಲ್ಲಿ ಉಳುಮೆ ಮಾಡಬೇಡಿ. ನನಗೆ ಮತ್ತು ನನ್ನ ಮಕ್ಕಳಿಗೆ ಜಮೀನು ಬೇಕೆಂದು ಹೇಳಿದ್ದಾಳೆ.

ಇಷ್ಟಕ್ಕೆ ಕುಪಿತರಾದ ಜಮೀನು ಖರೀದಿಸಿದ ವ್ಯಕ್ತಿ ಮತ್ತು ಆತನ ಮಗ, ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಗದ್ದೆಯಲ್ಲೇ ಆಕೆಯನ್ನು ಎಳೆದಾಡಿ ಅಮಾನವೀಯವಾಗಿ ಹಲ್ಲೆ ಮಾಡಿದ್ದು, ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪತಿ ಸುಮ್ಮನೆ ನಿಂತಿದ್ದ ಎನ್ನಲಾಗಿದೆ. ಬೆಟ್ಟದಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...