alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ಕೆ.ಶಿ. ಮಾವನ ಮನೆಯಲ್ಲಿ ಮುಗಿದಿಲ್ಲ ಪರಿಶೀಲನೆ

mys-dks-d

ಮೈಸೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮಾವನ ಮನೆಯ ಮೇಲೆ ದಾಳಿ ನಡೆಸಿರುವ ಐ.ಟಿ. ಅಧಿಕಾರಿಗಳು, ಕಳೆದ 3 ದಿನಗಳಿಂದ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ಇಟ್ಟಿಗೆ ಗೂಡು ಪ್ರದೇಶದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯನವರ ನಿವಾಸದಲ್ಲಿ ಐ.ಟಿ. ಅಧಿಕಾರಿಗಳು ನಿರಂತರವಾಗಿ ಪರಿಶೀಲನೆ ನಡೆಸಿದ್ದಾರೆ.

ತಿಮ್ಮಯ್ಯ, ಅವರ ಪುತ್ರ ಸತ್ಯನಾರಾಯಣ ಹಾಗೂ ಕುಟುಂಬದ ಕೆಲವರ ವಿಚಾರಣೆ ನಡೆಸಲಾಗಿದೆ. ಜೊತೆಗೆ ತಿಮ್ಮಯ್ಯನವರ ಆಪ್ತ ಎಡ್ವಿನ್ ನಿವಾಸದ ಮೇಲೆಯೂ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ನಿರಂತರವಾಗಿ ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಪರಿಶೀಲನೆ ಸಂದರ್ಭದಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ಹಾಗಾಗಿ ಹೆಚ್ಚಿನ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...