alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಡಕ್ಟರ್ ನಿಂದಾಗಿ ವಿದ್ಯಾರ್ಥಿ ಕಾಲು ಕಟ್ ಆಯ್ತು

ಮೈಸೂರು: ಬಸ್ ಕಂಡಕ್ಟರ್ ನಿರ್ಲಕ್ಷ್ಯದಿಂದಾಗಿ 9 ನೇ ತರಗತಿ ವಿದ್ಯಾರ್ಥಿ ಕಾಲು ಕಳೆದುಕೊಂಡ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ಉಲ್ಲೇಖ್ ಕಾಲು ಕಳೆದುಕೊಂಡ ಬಾಲಕ. ನಿನ್ನೆ ಸಂಜೆ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಉಲ್ಲೇಖ್ ಬಸ್ ಹತ್ತುವಾಗ ಕಂಡಕ್ಟರ್ ಬಾಗಿಲು ಹಾಕಿದ್ದಾನೆ.

ಕೆಳಗೆ ಬಿದ್ದ ಉಲ್ಲೇಖ್ ಕಾಲಿನ ಮೇಲೆ ಬಸ್ ಹಿಂಬದಿ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲಿದ್ದ ಜನ ಉಲ್ಲೇಖ್ ನನ್ನು ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ನಜ್ಜುಗುಜ್ಜಾಗಿದ್ದ ಕಾಲಿನ ಶಸ್ತ್ರ ಚಿಕಿತ್ಸೆ ನಡೆಸಿ, ಕಾಲು ಕತ್ತರಿಸಿದ್ದಾರೆ.

ಉಲ್ಲೇಖ್ ಬಳಿ ಬಸ್ ಪಾಸ್ ಇದ್ದ ಕಾರಣಕ್ಕೆ ಕಂಡಕ್ಟರ್ ಹತ್ತಿಸಿಕೊಳ್ಳಲು ಹಿಂದೇಟು ಹಾಕಿ ಬಾಗಿಲು ಹಾಕಿದ್ದಾರೆ ಎಂದು ಉಲ್ಲೇಖ್ ತಂದೆ ಆರೋಪಿಸಿದ್ದಾರೆ.

ಕೆಲವು ಸಾರಿಗೆ ಬಸ್ ಕಂಡಕ್ಟರ್ ಗಳು ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ತಮಗೆ ಪರಿಹಾರ ಬೇಡ, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಅವರು ದೇವರಾಜ ಸಂಚಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...