alex Certify
ಕನ್ನಡ ದುನಿಯಾ       Mobile App
       

Kannada Duniya

ಈಶ್ವರಪ್ಪ ಸುನಾಮಿಗೆ ಬೆಚ್ಚಿಬಿತ್ತಾ ಬಿ.ಎಸ್.ವೈ ಬಣ ?

bijp-mys-media

ಮೈಸೂರು: ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿಯಿಂದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಡಲಾಗಿದೆ.

ನಿನ್ನೆ ಸೈಲೆಂಟ್ ಆಗಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಇಂದು ಸುನಾಮಿ ಎಬ್ಬಿಸುವ ಸಾಧ್ಯತೆ ಇದೆ. ಈಶ್ವರಪ್ಪ ಮಾತನಾಡಿದಲ್ಲಿ ಮತ್ತೆ ಮಾಧ್ಯಮದಲ್ಲಿ ಭಿನ್ನಮತದ ಸುದ್ದಿಯಾಗುತ್ತದೆ ಎಂಬ ಕಾರಣಕ್ಕೆ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ರಾಜೇಂದ್ರ ಕಲಾಮಂದಿರದ ಆವರಣದಿಂದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಧ್ಯಮ ಪ್ರತಿನಿಧಿಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಗುವುದು. ಪಕ್ಷದ ವ್ಯವಸ್ಥೆಯಂತೆ ಕಾರ್ಯಕಾರಿಣಿ ಸದಸ್ಯರಲ್ಲದವರಿಗೆ ಅವಕಾಶ ನೀಡಿಲ್ಲ. ಇದನ್ನು ತಪ್ಪಾಗಿ ತಿಳಿಯಬಾರದು ಎಂದು ಹೇಳಿದ್ದಾರೆ.

ಮೊದಲ ದಿನದ ಕಾರ್ಯಕಾರಿಣಿಯಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಈಶ್ವರಪ್ಪ ಅಂತರ ಕಾಯ್ದುಕೊಂಡಿದ್ದು ಹೈಲೈಟ್ ಆಗಿತ್ತು.

ಈಶ್ವರಪ್ಪ ಎರಡನೇ ದಿನ ಗೋಷ್ಠಿಯೊಂದರ ನೇತೃತ್ವ ವಹಿಸಿದ್ದು, ಅವರು ಮಾತನಾಡುವ ಸಂದರ್ಭದಲ್ಲಿ ಅಸಮಾಧಾನ ಹೊರಹಾಕುವ ಸಾಧ್ಯತೆ ಇರುವ ಕಾರಣ ಮಾಧ್ಯಮ ಪ್ರತಿನಿಧಿಗಳನ್ನು ಕಾರ್ಯಕಾರಿಣಿಯಿಂದ ದೂರ ಇಡಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...