alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯಾಯಿತಿ ದರದ ರೇಷ್ಮೆ ಸೀರೆ ಕಂಡು ‘ಶಾಕ್’ ಆದ್ರು ಮಹಿಳೆಯರು

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಸರ್ಕಾರದ ಕೊಡುಗೆಯಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಶಾಕ್ ಆಗಿದೆ.

ಸೀರೆ ಖರೀದಿಗೆಂದು ಅಂಗಡಿಗೆ ತೆರಳಿದ್ದ ಮಹಿಳೆಯರು ಗುಣಮಟ್ಟವಿಲ್ಲದ ಸೀರೆಗಳನ್ನು ಕಂಡು ಕಿಡಿಕಿಡಿಯಾಗಿದ್ದಾರೆ. ಇವು ಪ್ರಿಂಟೆಡ್ ಸೀರೆಗಳಾಗಿದ್ದು, ಹಬ್ಬಕ್ಕಿರಲಿ ದಿನನಿತ್ಯ ಉಡಲೂ ಯೋಗ್ಯವಾಗಿಲ್ಲವೆಂದು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಸಚಿವ ಸಾ.ರಾ. ಮಹೇಶ್, ಮೈಸೂರು ಸಿಲ್ಕ್ ಸೀರೆಗಳು ಕೇವಲ ಉಳ್ಳವರಿಗೆ ಮಾತ್ರ ಸಿಗುತ್ತವೆ ಎಂಬ ಭಾವನೆ ಇದೆ. ಹೀಗಾಗಿ ಎಲ್ಲ ವರ್ಗದವರಿಗೂ ಇದು ಲಭ್ಯವಾಗುವಂತೆ ಮಾಡಲು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಕೇವಲ 4,500 ರೂ. ಗಳಿಗೆ ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಗುಣಮಟ್ಟವಿಲ್ಲದ ಸೀರೆಗಳು ಮಾರಾಟಕ್ಕಿಟ್ಟಿರುವುದು ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...